Delhi capitals | ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗುಡ್ ನ್ಯೂಸ್..!
ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಗಾಯದ ಸಮಸ್ಯೆಯಿಂದ ಐಪಿಎಲ್-2022 ಯಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದ್ದ ಸ್ಟಾರ್ ವೇಗಿ ಅನ್ರಿಚ್ ನೊರ್ಟೆಜೆ ಮುಂಬೈಗೆ ಬಂದಿಳಿದಿದ್ದಾರೆ.
ಇದು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.
ಆನ್ರಿಚ್ ತಮ್ಮ ಪತ್ನಿಯೊಂದಿಗೆ ಮುಂಬೈಗೆ ಬಂದಿರುವ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸೋಂಟದ ನೋವಿನಿಂದ ಬಳಲುತ್ತಿದ್ದ ಆನ್ರಿಚ್ ಸದ್ಯ ಚೇತರಿಸಿಕೊಂಡಿದ್ದಾರೆ.
ಆದ್ರೆ ಅವರ ಫಿಟ್ ನೆಸ್ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ.
ಇನ್ನು ಕಳೆದ ಸೀಸನ್ ನಲ್ಲಿ ಆನ್ರಿಚ್ ಉತ್ತಮ ಪ್ರದರ್ಶನ ನೀಡಿದ್ದರು.
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಆನ್ರಿಜ್ ಅವರನ್ನ 6.5 ಕೋಟಿ ರೂಪಾಯಿಗೆ ರಿಟೈನ್ಡ್ ಮಾಡಿಕೊಂಡಿತ್ತು.
ಮಾರ್ಚ್ 26ರಿಂದ ಈ ಬಾರಿಯ ಐಪಿಎಲ್ ಹಂಗಾಮ ಆರಂಭವಾಗಲಿದೆ. Anrich-nortje-reaches-mumbai









