ಮತಾಂತರ ನಿಷೇಧ ವಿಧೇಯಕ ಮಂಡನೆ : ಪ್ರತಿ ಹರಿದು ಹಾಕಿದ ಡಿ.ಕೆ.ಶಿವಕುಮಾರ್ d K shivakumar saaksha tv
ಬೆಳಗಾವಿ : ರಾಜ್ಯ ಸರ್ಕಾರ ಮತಾಂಶರ ನಿಷೇಧ ವಿಧೇಯಕವನ್ನು ಮಂಡನೆ ಮಾಡುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರ ಇಂದು ಸದನದಲ್ಲಿ ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಡನೆ ಮಾಡಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಸರ್ಕಾರ ಕದ್ದುಮುಚ್ಚಿ ವಿಧೇಯಕ ಮಂಡಿಸಿದೆ. ಈ ವಿಧೇಯಕ ಮಂಡಿಸಲು ಅನುಮತಿ ನೀಡುತ್ತಿರಲಿಲ್ಲ. ಈ ವಿಧೇಯಕ ನಮಗೆ ಬೇಡವೇ ಬೇಡ ಎಂದು ವಿಧೇಯಕದ ಪ್ರತಿಯನ್ನೇ ಹರಿದು ಆಡಳಿತ ಪಕ್ಷದ ನಾಯಕರ ಕಡೆಗೆ ಎಸೆದರು.
ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತಾಂತರ ನಿಷೇಧ ವಿಧೇಯಕ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಇನ್ನೊಂದೆಡೆ ಹೆಚ್ ಡಿ ಕುಮಾರಸ್ವಾಮಿ ಕೂಡ ವಿಧೇಯಕಕ್ಕೆ ವಿರೋಧ ವ್ಯಕ್ತಡಿಸಿದರು. ನಂತರ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ವಾಗ್ವಾದ ಹೆಚ್ಚಾದ ಪರಿಣಾಮ ಸರ್ಕಾರ ನಿರ್ಧಾರ ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.









