ಬಿಜೆಪಿ ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ : ವಾಟಾಳ್ ನಾಗರಾಜ್
ಚಿಕ್ಕಬಳ್ಳಾಪುರ : ಕನ್ನಡಪರ ಸಂಘಟನೆಗಳಿಂದ ಕನ್ನಡ ಉಳಿದಿದೆ. ಬಿಜೆಪಿ ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಡಿದ ಅವರು, ಬೆಳಗಾವಿ ನಮ್ಮದು, ಕಾರವಾರ ನಮ್ಮದು. ಆದ್ರೆ ಮಹಾರಾಷ್ಟ್ರದ ಶಿವಸೇನೆಯ ಸರ್ಕಾರದ ಸಿಎಂ ಉದ್ಧವ್ ಠಾಕ್ರೆ ಬೆಳಗಾವಿ ಪಡೀಬೇಕು ಎಂಬ ಹಠದಲ್ಲಿ ದಾಂಧಲೆ ಮಾಡುತ್ತಿದ್ದಾರೆ.
ಅವರಿಗೆ ಎಂಇಎಸ್ ಬೆಂಬಲ ನೀಡುತ್ತಿದೆ. ಇಷ್ಟೆಲ್ಲಾ ಆದರೂ ಕರ್ನಟಕ ಸರ್ಕಾರ ನಿಷ್ಕ್ರಿಯವಾಗಿದೆ. ಬೆಳಗಾವಿಯ ರಾಜಕರಾಣಿಗಳು ಕೋಮಾದಲ್ಲಿದ್ದಾರೆ. ಬೆಳಗಾವಿ ರಾಜಕಾರಣಿಗಳು ಮಹಾರಾಷ್ಟ್ರ ಹಾಗೂ ಎಂಇಎಸ್ ಎಜೆಂಟ್ ಗಳಗಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡ ಉಳಿದಿದ್ದರೇ ಅದು ಕೇವಲ ಕನ್ನಡಪರ ಸಂಘಟನೆಗಳಿಂದಾಗಿದೆ. ಯಡಿಯೂರಪ್ಪ ಸರ್ಕಾರ ತೀರ ಇತ್ತೀಚೆಗೆ ಬಂದಿರುವ ಎಲ್ಲಾ ಸರ್ಕಾರಗಳಿಗಿಂರಲೂ ಹೀನಾಯ ಸರ್ಕಾರವಾಗಿದೆ.
ಇದು ಕನ್ನಡ ವಿರೋಧಿ ಸರ್ಕಾರ. ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ. ಬಿಜೆಪಿ ಆರ್ ಎಸ್ ಎಸ್ ಸರ್ಕಾರ. ಇವರಿಗೆ ಹಿಂದಿ ಬಗ್ಗೆ ಅಭಿಮಾನವೇ ಹೊರತು ಕನ್ನಡದ ಬಗೆಗ ಅಲ್ಲ ಎಂದು ಬಿಜೆಪಿಗರ ವಿರುದ್ಧ ವಾಟಾಳ್ ಕಿಡಿಕಾರಿದರು.
ಇದೇ ವೇಳೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಹಾಗೂ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿದ ನಾಗರಾಜ್, ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 30 ರಂದು ರಾಜ್ಯದಲ್ಲಿ ರೈಲು ಬಂದ್ ಮಾಡಿ ಹೋರಾಟ ಮಾಡುವುದಾಗಿ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









