ಮತಾಂತರ ನಿಷೇಧ ವಿಧೇಯಕ : ಟ್ವಿಟ್ಟರ್ ನಲ್ಲಿ ಬಿಜೆಪಿ-ಕಾಂಗ್ರೆಸ್ ವಾರ್ #AntiConversionBill
ಬೆಂಗಳೂರು : ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ – ಬಿಜೆಪಿ ವಾರ್ ನಡೆಸುತ್ತಿವೆ.
ಈ ಹಿಂದೆ ಗೋ ಹತ್ಯಾ ನಿಷೇಧ ಕಾಯ್ದೆಗೂ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ #AntiConversionBill ಗೆ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷದ ನಿಲುವು : ಗೋ ಹತ್ಯೆಗೆ ಪ್ರೋತ್ಸಾಹ, ಮತಾಂತರಕ್ಕೆ ಸಮ್ಮತಿ. ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಅವಮಾನಿಸಬಹುದಾದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಮೊದಲು ಟ್ವೀಟ್ ಮಾಡಿತ್ತು.
https://twitter.com/BJP4Karnataka/status/1473235546210246656?s=20
ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್, ಜಾತಿ-ಧರ್ಮಗಳನ್ನು ಒಡೆದಾಳುವ ಜೀವ ವಿರೋಧಿ ಸಿದ್ಧಾಂತದ ಬಿಜೆಪಿ, ಭಾವನಾತ್ಮಕ-ಪ್ರಚೋದನಾತ್ಮಕ ರಾಜಕಾರಣದ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಮಾನಿಸುತ್ತಲೇ ಬಂದಿದೆ. ಬಿಜೆಪಿ ಎಲ್ಲವನ್ನೂ ಧರ್ಮದ ದೃಷ್ಟಿಯಲ್ಲಿ ನೋಡಿದರೆ, ನಾವು ಸಂವಿಧಾನದ ದೃಷ್ಟಿಯಲ್ಲಿ ನೋಡುತ್ತೇವೆ. ನಮ್ಮ ನಿಲುವು ಮಾನವ ಧರ್ಮ & ಶಾಂತಿ ಸಹಬಾಳ್ವೆಯ ಕಡೆಗೆ ಎಂದು ಬರೆದುಕೊಂಡಿದೆ.








