ಕೊರೊನಾ ಮಹಾಮಾರಿಗೆ ಸಿಲುಕಿ ತತ್ತರಿಸಿಹೋಗಿರುವ ಇಡೀ ಜಗತ್ತಿನ ಜನರಿಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಇದೀಗ ಗುಡ್ ನ್ಯೂಸ್ ಒಂದನ್ನ ನೀಡಿದೆ. ಇಡೀ ಜಗತ್ತಿನಾದ್ಯಂತ ವೈದ್ಯ ಲೋಕ ಕೊರೊನಾಗೆ ಲಸಿಕೆ ಕಂಡುಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿರುವ ಬೆನ್ನಲ್ಲೇ ಅಮೆರಿಕಾ ಕಂಪನಿ ಆಯಿಂಟ್ ಮೆಂಟ್ ಒಂದನ್ನು ತಯಾರಿಸಿದೆ.
ಈ ಆಯಿಟ್ ಮೆಂಟ್ ನ ವಿಶೇಷತೆಯೇನು..?
ಈ ಆಯಿಂಟ್ ಮೆಂಟ್ ಅನ್ನು ಮೂಗಿಗೆ ಹಚ್ಚಿಕೊಳ್ತಿದ್ದಂತೆ ಕೊರೊನಾ ವೈರಸ್ ಕ್ಷಣಮಾತ್ರದಲ್ಲಿ ಸಾಯುತ್ತದೆಯಂತೆ. ಇದನ್ನು ಅಡ್ವಾನ್ಸ್ಡ್ ಪೆನೆಟರೇಶನ್ ಟೆಕ್ನಾಲಜಿ ಎಲ್ಎಲ್ ಸಿ ತಯಾರಿಸಿದ್ದು, ಯುಎಸ್ಎಫ್ಡಿಎಯಿಂದ ಒಪ್ಪಿಗೆ ಸಿಕ್ಕಿದೆ.
ಒಟಿಸಿ ಆಯಿಂಟ್ಮೆಂಟ್ ರೀತಿಯಲ್ಲಿ ಇದನ್ನು ರಿಲೀಸ್ ಮಾಡಲಿದೆ. ಈ ಆಯಿಂಟ್ ಮೆಂಟ್ ಹಚ್ಚಿದ ಕೇವಲ 30 ಸೆಕೆಂಡಿಗಳಲ್ಲಿ ವೈರಸ್ ಸಾಯುತ್ತೆ ಎನ್ನಲಾಗುತ್ತದೆ. ಎರಡು ತಿಂಗಳ ಪರೀಕ್ಷೆ ತ್ರ ಇದಕ್ಕೆ ಅನುಮೋದನೆ ಸಿಕ್ಕಿದೆ.
ಇನ್ನೂ ವಿಶೇಷ ಎಂದರೆ ಕೇವಲ ಕೊರೊನಾ ಅಷ್ಟೇ ಅಲ್ಲ ಇತರೇ ಯಾವುದೇ ವೈರಸ್ ಇದ್ದರೂ ಸೆಕೆಂಡ್ ಗಳಲ್ಲೇ ಪ್ರಾಣ ಚೆಲ್ಲುತ್ತೆ ಎಂಬ ಮಾತು ಕೇಳಿ ಬರುತ್ತಿದೆ.









