ಬಾಲಿವುಡ್ ಸ್ಟಾರ್ ಗಳನ್ನ ಮಾರಾಟ ಮಾಡುತ್ತಿದ್ದರೆ ಸೌತ್ ಇಂಡಸ್ಟ್ರಿ ಕಥೆ ಹೇಳುತ್ತಿದೆ – ಅನುಪಮ್ ಖೇರ್
ಅನುಪಮ್ ಖೇರ್. ಯಾವುದೇ ಭಾಷೆಯ ಭೇಧವಿಲ್ಲದೆ ಎಲ್ಲಾ ಭಾಷೆಗಳಲ್ಲೂ ನಟಿಸುತ್ತಿರುವ ನಟ. ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ಅವರ ದಿ ಕಾಶ್ಮೀರ್ ಫೈಲ್ಸ್ ಮುಖಾಂತರ ಇಡೀ ಭಾರತೀಯರಿಗೆ ನಟನೆಯ ಮೂಲಕ ಪರಿಚಯಯವಾಗಿದ್ದಾರೆ.
ಇತ್ತೀಚೆಗೆ ತೆಲುಗು ನಟ ನಿಖಿಲ್ ಸಿದ್ಧಾರ್ಥ ಅವರ ಜೊತೆ ಕಾರ್ತೀಕೇಯ 2 ಚಿತ್ರದ ಮೂಲ ತೆಲುಗಿನಲ್ಲಿಯೂ ನಟಿಸಿದ್ದರು. ಹಿಂದಿಗೆ ಡಬ್ಬಿಂಗ್ ಆದ ಈ ಚಿತ್ರ ಬಾಲಿವುಡ್ ನ ಘಟಾನುಘಟಿ ಚಿತ್ರಗಳನ್ನೇ ಹಿಂದಿಕ್ಕಿ ಬಾಕ್ಸ್ ಆಫೀಸ್ ದೋಚುತ್ತಿದೆ. ಇತ್ತೀಚೆಗಷ್ಟೆ ಚಿತ್ರತಂಡ ಸಂತೋಷಕೂಟವನ್ನ ಹಮ್ಮಿಕೊಂಡಿತ್ತು. ಅದರಲ್ಲಿ ಮಾತನಾಡುಯತ್ತಾ ಸೌತ್ ಮತ್ತು ಬಾಲಿವುಡ್ ಚಿತ್ರಗಳ ಕುರಿತು ಮಾತನಾಡಿದ್ದಾರೆ.
ಬಾಲಿವುಡ್ ಚಿತ್ರಗಳು ದುಡ್ಡು ಮಾಡುತ್ತಿಲ್ಲ ಎಂಬುದು ಗೊತ್ತೆ ಇದೆ. ಆದರೆ ದಕ್ಷಿಣದಿಂದ ಡಬ್ ಆದ ಚಿತ್ರಗಳು ಉತ್ತಮವಾಗಿ ಓಡುತ್ತಿವೆ. ಹಾಗಾಗಿ ಸೌತ್ ವರ್ಸಸ್ ಬಾಲಿವುಡ್ ಎಂಬ ವಿಷಯದ ಮೇಲೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಈ ಎರಡು ಇಂಡಸ್ಟ್ರಿಗಳ ವ್ಯತ್ಯಾಸವನ್ನ ಅನುಪಮ್ ಖೇರ್ ವಿವರಿಸಿದ್ದಾರೆ. ಬಾಲಿವುಡ್ ಇಂಡಸ್ಟ್ರಿ ಸ್ಟಾರ್ ಗಳನ್ನ ಮಾರಾಟ ಮಾಡುತ್ತಿದ್ದರೆ ಸೌತ್ ಅದ್ಬುತವಾಗಿ ಕಥೆ ಹೇಳುತ್ತಿದೆ ಎಂದು ಹೇಳಿದ್ದಾರೆ. ನಾವು ಪ್ರೇಕ್ಷಕರಿಗಾಗಿ ಸಿನಿಮಾ ಮಾಡುತ್ತೇವೆ. ನೀವು ಯಾವ ದಿನ ಅವರನ್ನ ಕೀಳಾಗಿ ನೋಡುತ್ತೀರೋ ಆಗಿನಿಂದಲೇ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನಾನು ತೆಲುಗು ಚಿತ್ರಗಳಿಂದ ತುಂಬಾ ಕಲಿತಿದ್ದೇನೆ. ತಮಿಳು ಮತ್ತು ಮಲಯಾಳಂನಲ್ಲಿಯೂ ಸಿನಿಮಾ ಮಾಡಿದ್ದೇನೆ. ಅವರು ಯಾವುದೇ ಇಂಡಸ್ಟ್ರಿ ಅನುಸರಿಸುತ್ತಿಲ್ಲ. ಸೌತ್ ಇಂಡಸ್ಟ್ರಿ ಕಥೆಗಳನ್ನು ಹೇಳಿದರೆ, ಬಾಲಿವುಡ್ ಸ್ಟಾರ್‌ಗಳನ್ನು ಮಾರಾಟ ಮಾಡುತ್ತದೆ” ಎಂದು ಅನುಪಮ್ ಖೇರ್ ಹೇಳಿದರು.








