Bollywood – 67ರ ಹರೆಯದಲ್ಲೂ ಬಾಡಿ ಬಿಲ್ಡ್ ಮಾಡಿದ ಅನುಪಮ್ ಖೇರ್….
ಬಾಲಿವುಡ್ ನಟ ಅನುಪಮ್ ಖೇರ್ ಇಂದು ತಮ್ಮ 67 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಾಡಿ ಬಿಲ್ಡ್ ಮಾಡಿರುವ ಫೋಟೊ ಹಂಚಿಕೊಂಡು ತಮ್ಮ ಹುಟ್ಜು ಹಬ್ಬಕ್ಕೆ ಕ್ಕೆ ಶುಭ ಕೋರಿಕೊಂಡಿದ್ದಾರೆ. ತಮ್ಮ ಫೋಟೋವನ್ನು ಹಂಚಿಕೊಂಡರುವ ಅನುಪಮ್ ಖೇರ್ ನನಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇಂದು ನಾನು ನನ್ನ 67 ನೇ ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ. ನನ್ನ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಪ್ರೇರೇಪಿತನಾಗಿದ್ದೇನೆ. ಈ ಫೋಟೋಗಳು ನನ್ನ ನಿಧಾನಗತಿಯ ಪ್ರಗತಿಗೆ ಉದಾಹರಣೆಯಾಗಿದೆ.
https://www.instagram.com/p/Caxcbk2u69T/?utm_source=ig_embed&ig_rid=086647c0-d8a7-40a7-bde8-5d49fa29623c
ಫಿಟ್ನೆಸ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ಬಹಳ ಹಿಂದಿನಿಂದಲೂ ನನ್ನ ಕನಸಾಗಿತ್ತು. ಆದರೆ ಅದನ್ನು ನನಸಾಗಿಸಲು ನಾನು ಪ್ರಯತ್ನಿಸಿರಲಿಲ್ಲ. ಈಗ ಫಿಟ್ನೆಸ್ ಹಾದಿಯಲ್ಲಿ ಸಾಗಲು ಆರಂಭಿಸಿದ್ದೇನೆ. ಈ ಪಯಣವನ್ನು ನಿಮಗೆ ಪರಿಚಯಿಸಲು ಬಯಸುತ್ತೇನೆ. ಇನ್ನೊಂದು ವರ್ಷದಲ್ಲಿ ನನ್ನ ಇನ್ನೊಂದು ಹೊಸ ವರ್ಷನ್ ಅನ್ನು ನಾವು ಸೆಲೆಬ್ರೇಟ್ ಮಾಡುತ್ತೇವೆ’ ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ.
ಅನುಪಮ್ ಖೇರ್ ಅವರ ಮುಂಬರುವ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಚ್ 11 ರಂದು ಥಿಯೇಟರ್‌ಗಳಲ್ಲಿ ಬರಲಿದೆ. ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದೆ.
Anupam Kher turns 67; Shared body transformation photo on social media, said – I am very excited and motivated








