P V ಸಿಂಧು ಮನೆಗೆ ಬೇಟಿ ನೀಡಿದ ಅನುಪಮ್ ಖೇರ್ – ಟೋಫ್ರಿಗಳನ್ನ ನೋಡಿ ಅಚ್ಚರಿ
ಪಿ.ವಿ. ಸಿಂಧು.. ಭಾರತದ ಸೂಪರ್ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ. ಒಲಿಂಪಿಯನ್, ವಿಶ್ವ ಚಾಂಪಿಯನ್ ಆಗಿರುವ ಪಿ.ವಿ. ಸಿಂಧು ಅವರ ಮನೆಗೆ ಇತ್ತೀಚೆಗೆ ಬಾಲಿವುಡ್ ನ ಖ್ಯಾತ ನಟ ಅನುಪಮ್ ಖೇರ್ ಭೇಟಿ ನೀಡಿದ್ದರು.
ಈ ವೇಳೆ ಪಿ.ವಿ. ಸಿಂಧು ಅವರು ಅನುಪಮ್ ಖೇರ್ ಜೊತೆಗೆ ಕ್ರೀಡಾ ಬದುಕಿನ ಅವಿಸ್ಮರಣೀಯ ಘಳಿಗೆಗಳನ್ನು ಮೆಲುಕು ಹಾಕಿಕೊಂಡ್ರು. ಅಲ್ಲದೆ ಸಿಂಧು ಮನೆಯಲ್ಲಿ ಪೂರ್ತಿಯಾಗಿ ಅವರು ಗೆದ್ದಿರುವ ಪದಕಗಳು ಮತ್ತು ಟ್ರೋಫಿಗಳು ರಾರಾಜಿಸುತ್ತಿವೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಿಂಧು ಅವರ ಮನೆಯ ಹಾಲ್ ನಲ್ಲಿ ಕೆಲವೊಂದು ಪದಕ ಮತ್ತು ಟ್ರೋಫಿಗಳನ್ನು ಇಡಲು ಜಾಗವೇ ಇಲ್ಲ. ಇದನ್ನೆಲ್ಲಾ ಕಂಡ ಅನುಪಮ್ ಖೇರ್ ಸಿಂಧು ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದ್ರು. ಸಿಂಧು ಸಹ ಅಷ್ಟೇ ವಿನಯದಿಂದ ತಾನು ಗೆದ್ದಿರುವ ಪ್ರತಿಯೊಂದು ಪದಕ ಮತ್ತು ಟ್ರೋಫಿಗಳ ಬಗ್ಗೆ ಅನುಪಮ್ ಖೇರ್ ಗೆ ಮಾಹಿತಿ ನೀಡಿದ್ದರು.
https://www.instagram.com/p/CjFAFWQMrcF/?utm_source=ig_embed&utm_campaign=embed_video_watch_again
ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಅನುಪಮ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪಿವಿ ಸಿಂಧು ಅವರ ಪದಕಗಳು ಮತ್ತು ಟ್ರೋಫಿಗಳನ್ನ ಕಾಣಬಹುದು.
ತಮ್ಮ ಭೇಟಿಯ ಚಿತ್ರವನ್ನು ಹಂಚಿಕೊಂಡ ಸಿಂಧು, “ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೊಂದಿಗೆ ಸಮಯ ಕಳೆಯುವ ಭಾಗ್ಯ ಸಿಕ್ಕಿತ್ತು. ನಗು, ನೆನಪುಗಳು ಮತ್ತು ಗುಣಮಟ್ಟದ ಸಂಭಾಷಣೆ. ಎಂತಹ ಗೌರವ.” ಎಂದು ಬರೆದುಕೊಂಡಿದ್ದಾರೆ.
Anupam Kher visits PV Sindhu’s house; gets bowled over by her trophies








