‘She Pahi’ : ಮಹಿಳಾ ಪೊಲೀಸರೇ ರಿಯಲ್ ‘ಸ್ಟಾರ್ಸ್’ : ಅನುಷ್ಕಾ ಶೆಟ್ಟಿ
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ನಡೆದ ಶಿ ಪಾಹಿ ( She Pahi) ವಾರ್ಷಿಕ ಸಮ್ಮೇಳನಕ್ಕೆ ಮಖ್ಯ ಅತಿಥಿಯಾಗಿ ತೆರಳಿದ್ದರು. ಹೈದ್ರಾಬಾದ್ ನಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಸಿನಿಮಾರಂಗದಲ್ಲಿ ಮುಖ್ಯ ಅತಿಥಿಯಾಗಿ ಅನುಷ್ಕಾ ಭಾಗವಹಿಸಿದ್ದರು.
ಈ ವೇಳೆ ಕಾರ್ಯಕ್ರಮವನ್ನ ಉದ್ದೇಶಿ ಮಾತನಾಡಿದ ಅನುಷ್ಕಾ ಸಮ್ಮೇಳದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳನ್ನ ಉದ್ದೇಶಿ, ಮಹಿಳಾ ಪೊಲೀಸ್ ಅಧಿಕಾರಿಗಳು ನಿಜಕ್ಕೂ ರಿಯಲ್ ಸ್ಟಾರ್ ಗಳು . ಅವರೇ ನಿಜವಾದ ತಾರೆಯರು. ಅವರು ಜನರನ್ನ ರಕ್ಷಿಸಲು, ಹಗಲು ಇರುಳು ಶ್ರಮಿಸುತ್ತಾರೆ. ನಾವು ನಟರಾಗಿ ತಾರೆಯರೆಂದು ಗುರುತಿಸಿಕೊಂಡಿದ್ದೇವೆ. ಆದ್ರೆ ಈ ಸಮ್ಮೇಳದಲ್ಲಿ ಆಸನರಾಗಿರುವ ನೀವು ನಿಜವಾದ ಸ್ಟಾರ್ ಗಳು.
ನಮ್ಮ ಹಿಂದೆ, ನಮ್ಮ ಸುರಕ್ಷತೆಗಾಗಿ, ನಿಮ್ಮ ಕಠಿಣ ಪರಿಶ್ರಮ, ಅದರಿಂದಲೇ ನಾವು ಸುರಕ್ಷತವಾಗಿದ್ದೇವೆ ಎಂಬ ನಿರಾಳತೆ. ನಿಮ್ಮ ತ್ಯಾಗ ಇದೆಲ್ಲ ತರ್ಕಕ್ಕೆ ನಿಲುಕದ್ದು. ಈ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ನನಗೆ ತುಂಬಾನೆ ಸಂತಸ ತಂದಿದೆ ಎಂದಿದ್ದಾರೆ.
ಸಲಾರ್ ಸೆಟ್ ಗೆ ‘ಬರ್ತ್ ಡೇ ಗರ್ಲ್’ ಗೆ ಅದ್ಧೂರಿಯಾಗಿ ವೆಲ್ ಕಮ್ ಮಾಡಿದ ಟೀಮ್ ..!
ಇದೇ ವೇಳೆ ಸಮ್ಮೇಳದಲ್ಲಿ ಮುಖ್ಯ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಅನುಷ್ಕಾ ಮೂರು ಡಯಲ್ 100 ತಕ್ಷಣದ ಪ್ರತಿಕ್ರಿಯೆ ವಾಹನಗಳು ಮತ್ತು ವರ್ತುಸಾ ಪ್ರಾಯೋಜಿಸಿದ ಒಂದು ಎಸ್ ‘ಇಇ ಶಟಲ್’ ಬಸ್ ಅನ್ನು ಉದ್ಘಾಟಿಸಿದ್ರು. ಈ ಬಸ್ ಐಟಿ ಕಾರಿಡಾರ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಹಾಗೂ ಸುರಕ್ಷಿತ ಸೇವೆ ಒದಗಿಸುತ್ತೆ. ಈ ಬಸ್ ನಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಬಸ್‌ನಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇರುತ್ತಾರೆ.
ಇನ್ನೂ ಈ ಸಮ್ಮೇಳದಲ್ಲಿ ಸುಮಾರು 750 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ‘SHEpahi’ SHE ಅಂದ್ರೆ ಅವಳು. ಪಾಹಿ ಅಂದ್ರೆ ಒಳ್ಳೆಯ ಕೆಲಸ. ಇದು ಮಹಿಳಾ ಪೊಲೀಸ್ ಅಧಿಕಾರಿಗಳು ಪೊಲೀಸ್ ಪಡೆಗೆ ತರುವಶಕ್ತಿ, ಸಾಮರ್ಥ್ಯ, ಮಾನವೀಯತೆ, ಪರಾನುಭೂತಿಯ ಸಂಕೇತವಾಗಿದೆ.
ಚಿತ್ರಮಂದಿರದಲ್ಲಿ 100% ಸೀಟು ಭರ್ತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್..!
ಅಲ್ಲು ಅರ್ಜುನ್ ʻಪುಷ್ಪʼ ಸಿನಿಮಾ ರಿಲೀಸ್ ಡೇಟ್ ರಿವೀಲ್ : ಯಾವಾಗ ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel