ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಜೊತೆ ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅನುಷ್ಕಾ ಆಗಾಗ ಇನ್ ಸ್ಟಾಗ್ರಾಂ ನಲ್ಲಿ ಹಲವಾರು ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಇದೀಗ ಕೆಲ ಫೋಟೋಗಳನ್ನ ಅಪಲೋಡ್ ಮಾಡಿದ್ದು, ತಮ್ಮ ಹಾಟ್ ಫೋಟೋ ಶೂಟ್ ನಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ವೋಗ್ ಇಂಡಿಯಾಗಾಗಿ ಅನುಷ್ಕಾ ಶರ್ಮಾ ಫೋಟೋಶೂಟ್ ಮಾಡಿದ್ದು, ಈ ಫೋಟೋಗಳನ್ನ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅನುಷ್ಕಾ ಅವರ ಹಾಟ್ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನುಷ್ಕಾರ ಈ ಲುಕ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಕಮೆಂಟ್ ಗಳು ಸಿಕ್ಕಿವೆ. ಇದರ ನಡುವೆ ಪತ್ನಿಯ ಹಾಟ್ ಫೋಟೋಶೂಟ್ ಗೆ ವಿರಾಟ್ ಕೊಹ್ಲಿ ಸಹ ಲೈಕ್ ಮಾಡಿ ಹಾರ್ಟ್ ಶೇರ್ ಮಾಡಿದ್ದಾರೆ. ಕೊಹ್ಲಿ ಅವರ ಕಮೆಂಟ್ ಗೆ ಭರ್ಜರಿ ಲೈಕ್ಸ್ ಸಿಕ್ಕಿವೆ.








