ಅನುಷ್ಕಾಗೆ ಕಂಕಣ ಭಾಗ್ಯ ? ಉದ್ಯಮಿ ಜೊತೆ ಮದುವೆ ಗಾಸಿಪ್….
ಅನುಷ್ಕಾ ಶೆಟ್ಟಿ – ಈ ಹೆಸರನ್ನ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಮೂಲತಃ ಕನ್ನಡದವರಾದರೂ ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲೇ ಟಾಪ್ ಸೆಲೆಬ್ರಿಟಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಅನುಷ್ಕಾ ಚಿತ್ರರಂಗಕ್ಕೆ ಕಾಲಿಟ್ಟು 17 ವರ್ಷಗಳು ಸಂದಿವೆ.
ಅರುಂಧತಿ ನಂತರದಿಂದ ಹೆಚ್ಚಾದ ಅನುಷ್ಕಾ ಕ್ರೇಜ್ ಬಾಹುಬಲಿ ಮತ್ತು ಭಾಗಮತಿಯಂತಹ ಸಿನಿಮಾಗಳ ನಂತರ ಮತ್ತೊಂದು ಹಂತ ತಲುಪಿದೆ. ಅನುಷ್ಕಾ ಕೊನೆಯದಾಗಿ ನಟಿಸಿದ್ದು ‘ನಿಶಬ್ದಂ’ ಸಿನಿಮಾದಲ್ಲಿ. ಆ ನಂತರ ಬೆಳ್ಳಿ ತೆರೆ ಮೇಲೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ಮುದ್ದಾಗಿ ಸ್ವೀಟಿ ಎಂದು ಕರೆಸಿಕೊಲ್ಳುವ ಅನುಷ್ಕಾಗೆ ವಯಸ್ಸು 40 ದಾಟಿಯಾದರೂ ಇನ್ನೂ ಮದುವೆಯಾಗಿಲ್ಲ. ಪ್ರಭಾಸ್ ಜೊತೆ ಅನುಷ್ಕಾ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯಾದರೂ, ಈ ಬಗ್ಗೆ ಪ್ರಭಾಸ್ ಅಥವಾ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚೆಗೆ ಅನುಷ್ಕಾ ಶೆಟ್ಟಿ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಷ್ಕಾ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಉದ್ಯಮಿ ಬೆಂಗಳೂರಿನವರು ಎಂದು ಒಬ್ಬರು ಹೇಳಿದರೆ, ದುಬೈನಿಂದ ಬಂದವರು ಎಂದು ಮತ್ತೊಬ್ಬರು ಹೇಳುತ್ತಾರೆ. ಮತ್ತು ಅದು ಎಷ್ಟು ಸತ್ಯ ಎಂದು ದೇವರಿಗೆ ಮಾತ್ರ ತಿಳಿದಿದೆ. ಆದರೆ, 40ರ ಹರೆಯದ ಅನುಷ್ಕಾ ಮದುವೆ ಯಾವಾಗ ಎಂದು ಎಲ್ಲರೂ ಕಾಯುತ್ತಿದ್ದಾರೆ.
Anushka Shetty: Devasena Anushka Shetty Marriage with a Great Hearted boy?








