’ನಿಮ್ಮ ಬಗ್ಗೆ ಹೆಮ್ಮೆ ಇದೆ’ : ವಿರಾಟ್ ಬಗ್ಗೆ ಅನುಷ್ಕಾ ಭಾವನಾತ್ಮಕ ಪತ್ರ!
ಏಕಾಏಕಿ ಟೆಸ್ಟ್ ಕ್ರಿಕಟ್ ನಾಯಕತ್ವಕ್ಕೆ ಗುಡ್ ಬೈ ಹೇಳುವ ಮೂಲಕ ವಿರಾಟ್ ಕೊಹ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ವಿರಾಟ್ ವಿದಾಯದ ಬಗ್ಗೆ ದಿಗ್ಗಜ ಕ್ರಿಕೆಟಿಗರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಅದರಂತೆ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಇನ್ ಸ್ಟಾಗ್ರಾಂನಲ್ಲಿ ಕೊಹ್ಲಿ ಬಗ್ಗೆ ಭಾವನಾತ್ಮಕ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ.
ಜೊತೆಗೆ ವಿರಾಟ್ ರ ನಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಪತ್ರದಲ್ಲಿ… ವಿರಾಟ್ ಕೊಹ್ಲಿ ಮೊದಲು ಟೀಂ ಇಂಡಿಯಾದ ನಾಯಕರಾದ ದಿನವನ್ನು ನೆನಪಿಸಿಕೊಂಡಿದ್ದಾರೆ.
‘2014ರಲ್ಲಿ ಧೋನಿ ಕ್ರಿಕೆಟ್ ಗೆ ವಿದಾಯ ಹೇಳಿದಾಗ ನೀವು ಟೀಂ ಇಂಡಿಯಾದ ನಾಯಕರಾಗಿದ್ದೀರಿ ಎಂದು ಹೇಳಿದ ದಿನ ನನಗೆ ನೆನಪಿದೆ.
ಅದಾದ ನಂತರ ನಾವು ಧೋನಿ ಜೊತೆಗೆ ಚಾಟ್ ಮಾಡ್ವಿ. ಆಗ ಧೋನಿ ಇನ್ಮುಂದೆ ನಿನ್ನ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತೆ ನೋಡು ಎಂದು ತಮಾಷೆ ಮಾಡಿದ್ದರು.
ಆ ಮಾತಿಗೆ ನಾವೆಲ್ಲಾ ತುಂಬಾ ನಕ್ಕಿದ್ದೇವು. ಆ ದಿನದಿಂದ ನಿಮ್ಮ ಗಡ್ಡ ಬೆಳ್ಳಗಾಗುವುದನ್ನ ನಾನು ನೋಡಿದ್ದೇನೆ.
ಟೀಂ ಇಂಡಿಯಾದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ನನಗೆ ಹೆಮ್ಮೆಇದೆ ಎಂದು ಬರೆದಿದ್ದಾರೆ.
ಅಲ್ಲದೇ 2014ರಲ್ಲಿ ನೀವು ತುಂಬಾ ಚಿಕ್ಕವರಾಗಿದ್ದಾಗ ಒಳ್ಳೆಯ ಉದ್ದೇಶಗಳು, ಸಕಾರಾತ್ಮಕ ಗುರಿಗಳು ನಿಮ್ಮನ್ನು ಇಂದಿಗೂ ಜೀವನದಲ್ಲಿ ಮುನ್ನಡೆಸುತ್ತವೆ.
ನೀವು ಎದುರಿಸಿದ ಬಹಳಷ್ಟು ಸವಾಲುಗಳು ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಸೇರಿವೆ. ಬಹುಶಃ ಇದುವೇ ಜೀವನ ಹೌದಲ್ಲವೇ?
ನಿಮ್ಮ ಅನುಭವವನ್ನು ಹಾಗೂ ಬಲದೊಂದಿಗೆ ಭಾರತ ತಂಡದ ಪ್ರತಿ ಜಯದಲ್ಲಿ ಧಾರೆ ಎರೆದಿದ್ದೀರಿ.
ಕೆಲವು ಪಂದ್ಯಗಳ ಸೋಲಿನ ಬಳಿಕ ನಿಮ್ಮ ಪಕ್ಕದಲ್ಲಿ ಕುಳಿತು ಕಣ್ಣೀರು ಹರಿಯುವುದನ್ನು ನೋಡಿದ್ದೇನೆ.
ಪಂದ್ಯ ಸೋಲಲು ಕಾರಣ ಏನು? ಹೇಗೆ ಸುಧಾರಿಸಬಹುದಿತ್ತು ಅನ್ನೋ ಬಗ್ಗೆ ನೀವು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ್ದೀರಿ.
ನಿಮ್ಮ ರೀತಿಯಲ್ಲೇ ಉತ್ಸಾಹ ಹಾಗೂ ಲೆಕ್ಕಾಚಾರ ಬೇರೆಯವರಿಂದಲೂ ನಿರೀಕ್ಷೆ ಮಾಡಿದ್ದೀರಿ.
ನೀವು ಯಾವಾಗ್ಲೂ ಅಸಾಂಪ್ರದಾಯಿಕ ಮತ್ತು ಬಹಿರಂಗವಾಗಿಯೂ ಇದೇ ರೀತಿ ಕಾಣಿಸಿಕೊಳ್ಳುತ್ತೀರಿ” ಎಂದಿದ್ದಾರೆ.








