ಇಷ್ಟು ದಿನ ವಿರೋಧ ಪಕ್ಷಗಳು ಮಾತ್ರ ಸದ್ಯದ ಪರಿಸ್ಥಿತಿಯನ್ನು ಟೀಕಿಸಿ ಕೆಂಡ ಕಾರುತ್ತಿರೋದು ಕಂಡಿದ್ದೇವೆ. ಆದ್ರೆ ಇದಕ್ಕೆ ಪುಷ್ಟಿ ನೀಡುವಂತೆ ಆರ್ ಎಸ್ ಎಸ್ ಮುಖ್ಯಸ್ಥರು ಸಹ ಮಾತನಾಡಿದ್ದಾರೆ. ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ, ಅತೃಪ್ತಿ ಹೆಚ್ಚಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಜಗತ್ತಿನಲ್ಲಿ 3ನೇ ಮೂರನೇ ಮಹಾಯುದ್ಧದ ಬೆದರಿಕೆ ಹೆಚ್ಚಾಗುತ್ತಿದೆ, ಯುದ್ದ ನಡೆದರೂ ನಡೆಯಬಹುದು ಎಂದಿದ್ದಾರೆ. ಅದರ ಜೊತೆಗೆ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯನ್ನು ಭಾರತ ಬುದ್ದಿವಂತಿಕೆಯಿಂದ ನಿರ್ವಹಣೆ ಮಾಡಬೆಕು ಎಂದಿದ್ದಾರೆ. ಇಡೀ ಪ್ರಪಂಚಕ್ಕೆ ಕುಟುಂಬ ವ್ಯವಸ್ಥೆ ಹೇಳಿಕೊಟ್ಟಿದ್ದು ಭಾರತೀಯರು. ಧರ್ಮ ಪ್ರತಿಪಾದನೆಯಲ್ಲಿ ಮುಂದಿರುವ ಭಾರತ ಜಗತ್ತಿಗೆ ಧರ್ಮವನ್ನು ಪ್ರಚಾರಮಾಡಬೇಕು. ಭಾರತದ ಸಾಮಾಜಿಕ ವ್ಯವಸ್ಥೆ ಇಡೀ ಪ್ರಪಂಚಕ್ಕೆ ಮಾದರಿ ಅದನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕಿದೆ ಎಂದರು.
ಪವಿತ್ರಾ ಗೌಡಗೂ ಜಾಮೀನು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೊಸ ತಿರುವು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಏಳು ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಈ ಮಧ್ಯೆ, ಪ್ರಕರಣದ...