ಬೆಂಗಳೂರು : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತು ಒಗೆಯುವವರೆಗೂ ನಾವು ಸುಮ್ಮನೆ ಕೂರಬಾದರು.
ಸದ್ಯದ ಸಮಸ್ಯೆಗಳಿಗೆ ಬಿಜೆಪಿಯನ್ನು ಕೊತ್ತಿಗೆಯುವುದೇ ಪರಿಹಾರ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ನಗರದಲ್ಲಿ ರೈತರ ಪ್ರತಿಭಟನೆ ಬೆಂಬಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ರೈತರ ಮೇಲೆ ಪ್ರಧಾನಿ ಮೋದಿಯವರ ವಕ್ರದೃಷ್ಟಿ ಬಿದ್ದಿರಲಿಲ್ಲ.
ಹೀಗಾಗಿ ರೈತರ ಆದಾಯ ಕಡಿಮೆ ಆಗಿರಲಿಲ್ಲ. ಮೋದಿ ಅವಧಿಯಲ್ಲಿ ಅಂಬಾನಿ ಮತ್ತು ಅದಾನಿ ಮಾತ್ರ ಶ್ರೀಮಂತರಾದ್ರು.
ದೇಶ ಹಿಂದೆ ಬಿದ್ರೆ ಅಂಬಾನಿ ಮಾತ್ರ ಪ್ರಪಂಚದಲ್ಲಿಯೇ ಐದನೇ ಶ್ರೀಮಂತರಾದ್ರು. ಬಿಜೆಪಿ ಇದೇ ರೀತಿ ಮುಂದುವರಿಯಲು ಬಿಟ್ರೆ ದೇಶ ಅಧೋಗತಿಗೆ ಹೋಗುತ್ತೆ.
ಇದನ್ನೂ ಓದಿ : ಎಂಪಿ ಉಮೇಶ್ ಜಾಧವ್ ಗೆ ಎದೆನೋವು : ಆಸ್ಪತ್ರೆಗೆ ದಾಖಲು
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಕಿತ್ತು ಒಗೆಯುವವರೆಗೂ ಸುಮ್ಮನೆ ಕೂರಬಾರದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಧರ್ಮ ಜನರ ಸಮಸ್ಯೆಗಳಲ್ಲಿ ಭಾಗಿಯಾಗುವುದು. ಸಮಸ್ಯೆಗಳನ್ನು ನಾವು ಹೊರಗೆ, ವಿಧಾನಸಭೆಯಲ್ಲಿ ಮಾತಾಡಿದ್ದೇವೆ.
ಇವರನ್ನು ತೆಗೆಯದಿದ್ದರೆ ರೈತರು ಉಳಿಯಲ್ಲ, ಕಾರ್ಮಿಕರೂ ಉಳಿಯಲ್ಲ. ಬರಿ ಅದಾನಿ, ಅಂಬಾನಿ ಉಳಿಯುತ್ತಾರೆ.
ನಾವು ಚುನಾವಣೆ ಬಂದಾಗ ತಯಾರಿ ಮಾಡುವುದಲ್ಲ ಈಗಿನಿಂದಲೇ ಹೋರಾಟ ಮಾಡಬೇಕು.
ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಕೊಟ್ಟರು.