ಬೆಂಗಳೂರು : ರೈತರ ಕರ್ನಾಟಕ ಬಂದ್ ಗೆ ನಿಷೇಧ ಹೇರುವ ಬದಲು, ನಿಮ್ಮ ರೈತ-ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧ ಹೇರಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕಿಡಿಕಾರಿದ್ದಾರೆ.
ಇಂದಿನ ಕರ್ನಾಟಕ ಬಂದ್ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿರುವ ರಣದೀಪ್ ಸುರ್ಜೇವಾಲ, ಮಾನ್ಯ ಯಡಿಯೂರಪ್ಪನವರೇ,
ರೈತರ ಕರ್ನಾಟಕ ಬಂದ್ ಗೆ ನಿಷೇಧ ಹೇರುವ ಬದಲು, ನಿಮ್ಮ ರೈತ-ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧ ಹೇರಿ.
ನೀವು ಇದನ್ನೂ ಓದಿ : ಭಾರತದಲ್ಲಿ 60 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ರಾಜ್ಯವನ್ನೇ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ ಹಿಂಪಡೆಯಿರಿ.
ಎಪಿಎಂಸಿ ಕಾಯ್ದೆಗೆ ಮಾಡಿರುವ ಕೆಟ್ಟ ತಿದ್ದುಪಡಿ ರದ್ದುಮಾಡಿ. ಇದು ನಿಮಗೆ ಅಗ್ನಿ ಪರೀಕ್ಷೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಂದ 8500+ ಜನರು ಮೃತಪಟ್ಟಿರುವಾಗ CM ಯಡಿಯೂರಪ್ಪ & ಅವರ ಸಚಿವರಿಗೆ ನಿದ್ದೆ ಬರುವುದಾದರೂ ಹೇಗೆ?
ದಿನಂಪ್ರತಿ 9000+ ಹೊಸ ಕೇಸ್ ಪತ್ತೆಯಾಗಿ, 1 ಲಕ್ಷ ಸಕ್ರಿಯ ಪ್ರಕರಣದೊಂದಿಗೆ, ಈವರೆಗೂ ರಾಜ್ಯದಲ್ಲಿ 5,75,000 ಕೇಸ್ ಗಳಾಗಿವೆ.
ಆದರೆ ಅಸಮರ್ಥ & ಬೇಜವಾಬ್ದಾರಿ ಬಿಜೆಪಿ ಸರ್ಕಾರ ಮಾತ್ರ ಇನ್ನೂ ನಿದ್ದೆಯಿಂದೆದ್ದಿಲ್ಲ.
— Randeep Singh Surjewala (@rssurjewala) September 28, 2020
ಮತ್ತೊಂದು ಟ್ವೀಟ್ ನಲ್ಲಿ ರಾಜ್ಯದಲ್ಲಿ ಕೋವಿಡ್ ನಿಂದ 8500+ ಜನರು ಮೃತಪಟ್ಟಿರುವಾಗ ಅಒ ಯಡಿಯೂರಪ್ಪ & ಅವರ ಸಚಿವರಿಗೆ ನಿದ್ದೆ ಬರುವುದಾದರೂ ಹೇಗೆ?.
ದಿನಂಪ್ರತಿ 9000+ ಹೊಸ ಕೇಸ್ ಪತ್ತೆಯಾಗಿ, 1 ಲಕ್ಷ ಸಕ್ರಿಯ ಪ್ರಕರಣದೊಂದಿಗೆ, ಈವರೆಗೂ ರಾಜ್ಯದಲ್ಲಿ 5,75,000 ಕೇಸ್ ಗಳಾಗಿವೆ.
ಆದರೆ ಅಸಮರ್ಥ & ಬೇಜವಾಬ್ದಾರಿ ಬಿಜೆಪಿ ಸರ್ಕಾರ ಮಾತ್ರ ಇನ್ನೂ ನಿದ್ದೆಯಿಂದೆದ್ದಿಲ್ಲ ಎಂದು ಕುಟುಕಿದ್ದಾರೆ.