ಆರ್ಥಿಕ ನೆರವಿಗಾಗಿ ಮನವಿ
ಬೆಂಗಳೂರು : ಕೋಲಾರ ಮೂಲದ ಆನಂದ್ ಎಂಬ ಯುವಕ ಅಪಘಾತಕ್ಕೀಡಾಗಿದ್ದು, ಚಿಕಿತ್ಸೆಗಾಗಿ 10 ಲಕ್ಷ ರೂಪಾಯಿ ಬೇಕಾಗಿದೆ. ಈ ಹಣ ಹೊಂದಿಸಲಾಗದೇ ಕುಟುಂಬ ಕಂಗಾಲಾಗಿದೆ.. ಮೂಲತಃ ಕೋಲಾರದ ಮುಳಬಾಗಿಲು ತಾಲೂಕಿನ ಶ್ರೀರಂಗ ಪುರದ ನಿವಾಸಿಯಾದ ಆನಂದ್ ಮೈ ಗಾರ್ಡನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಳಿಗ್ಗೆ ಬೆಂಗಳೂರಿನ ಹೆಬ್ಬಾಳದ ಬಳಿ ಅಪಘಾತವಾಗಿದ್ದು, ಕೂಡಲೇ ಅವರನ್ನು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದರೂ, ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆ.
ಆನಂದ್ ಅವರ ಕುಟುಂಬ ಒಂದಿಷ್ಟು ಹಣವನ್ನು ಹೊಂದಿಸಿದರೂ ಅದು ಸದ್ಯದ ಚಿಕಿತ್ಸೆಗೆ ಆಗುತ್ತದೆ. ಆನಂದ್ ಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದು, ಆನಂದ್ ಸ್ನೇಹಿತರು ತಮ್ಮ ಕೈಯಲ್ಲಾದ ಆರ್ಥಿಕ ಸಹಾಯ ಮಾಡಿದ್ದಾರೆ. ಆದರೂ 10 ಲಕ್ಷ ದೊಡ್ಡ ಮೊತ್ತವಾಗಿದ್ದು, ಸೋಶಿಯಲ್ ಮೀಡಿಯಾ ಮೂಲಕ ಆರ್ಥಿಕ ಸಹಾಯ ಕೋರಿದ್ದಾರೆ.
ಇವರಿಗೆ ಸಹಾಯ ಮಾಡಲು ಇಚ್ಛಿಸುವವರು 9980915728 ಈ ನಂಬರ್ ಗೆ ಫೋನ್ ಪೇ, ಗೂಗಲ್ ಪೇ ಮಾಡಬಹುದು.
ಅಥವಾ
ccount name : Imagine enterpeises and marketing solution. Account NO : 65245824142. IFSC NO : SBI0032294 ಖಾತೆಗೆ ಹಣ ಜಮೆ ಮಾಡಬಹುದಾಗಿದೆ.
https://milaap.org/fundraisers/support-anand-155?utm_medium=payment_created&utm_source=campaign









