2020-21 ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆಪ್ಟೆಂಬರ್11: ಕರ್ನಾಟಕದ ಕ್ರೀಡಾ ಪೋಷಕರನ್ನು ಗುರುತಿಸಿ, ಗೌರವಿಸುವ ನಿಟ್ಟಿನಲ್ಲಿ 2020-21 ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ರತ್ನ ಪ್ರಶಸ್ತಿ ಯೋಜನೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ 2020-21 ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ರತ್ನ ಪ್ರಶಸ್ತಿಗೆ ಅರ್ಹ ಮತ್ತು ಆಸಕ್ತ ಕ್ರೀಡಾ ಪೋಷಕರಿಂದ ಪ್ರಸ್ತಾವನೆಗಳನ್ನು ಸಲ್ಲಿಸಲು ಕೋರಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ನೆರವು
ನೀಡಿರುವ ಕ್ರೀಡಾ ಪೋಷಕರು ಈ ಪ್ರಶಸ್ತಿಗೆ ಅರ್ಹರಿರುತ್ತಾರೆ. ಆಸಕ್ತ ಕ್ರೀಡಾ ಪೋಷಕರು ಸೆಪ್ಟೆಂಬರ್ 15-09-2020 ರ ಒಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ಕೋರಲಾಗಿದ್ದು, ತಡವಾಗಿ ಬಂದ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಷರತ್ತುಗಳಿಗಾಗಿ ಧಾರವಾಡ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ದೂರವಾಣಿ ಸಂಖ್ಯೆ: 0836-2447424 ಸಂಪರ್ಕಿಸುವಂತೆ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








