ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ 65 ಹುದ್ದೆಗಳಿಗೆ ಅರ್ಜಿ ಆಹ್ವಾನ Saaksha Tv
Indian Coast Guard Recruitment 2022: ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ 65 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಜೆನೆರಲ್ ಡ್ಯೂಟಿ /ಕಮರ್ಷಿಯಲ್ ಪೈಲಟ್ ಲೈಸನ್ಸ್ (ಎಸ್‌ಎಸ್‌ಎ), ಟೆಕ್ನಿಕಲ್ (ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಸಬಹುದಾಗಿದೆ.
ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ ಕುರಿತು ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳು: ಜೆನೆರಲ್ ಡ್ಯೂಟಿ /ಕಮರ್ಷಿಯಲ್ ಪೈಲಟ್ ಲೈಸನ್ಸ್ (ಎಸ್‌ಎಸ್‌ಎ) – 50
ಟೆಕ್ನಿಕಲ್ (ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್) – 15
ಪ್ರಮುಖ ದಿನಾಂಕಗಳು:
ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ: 18-02-2022 ರ ಮಧ್ಯಾಹ್ನ 11 ಗಂಟೆಯಿಂದ ಪ್ರಾರಂಭ
ಇನ್ನೂ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 28-02-2022 ರ ಸಂಜೆ 05-00 ಗಂಟೆವರೆಗೆ.
ವಿದ್ಯಾರ್ಹತೆ:
ಜೆನೆರಲ್ ಡ್ಯೂಟಿ: ಬ್ಯಾಚುಲರ್ ಡಿಗ್ರಿ
ಕಮರ್ಷಿಯಲ್ ಪೈಲರ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) : 12ನೇ ತರಗತಿ ಪಾಸ್.
ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್): ಬಿಇ ಪಾಸ್
ವಯೋಮಿತಿ ಅರ್ಹತೆಗಳು
– ಜೆನೆರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 01-07-1998 ಮತ್ತು 30-06-2002 ರ ನಡುವೆ ಜನಿಸಿರಬೇಕು.
– ಕಮರ್ಷಿಯಲ್ ಪೈಲಟ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01-07-1998 ರಿಂದ 30-06-2004 ರ ನಡುವೆ ಜನಿಸಿರಬೇಕು.
– ಟೆಕ್ನಿಕಲ್ (ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್) ಹುದ್ದೆಗೆ ಅರ್ಜಿ ಸಲ್ಲಿಸುವವರು ದಿನಾಂಕ 01-07-1998 ಮತ್ತು 30-06-2002 ರ ನಡುವೆ ಜನಿಸಿರಬೇಕು.








