ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾಗರಾಜ ಬಿ.ಸಿ. ಅವರು ಮುಖ್ಯ ಸಂಶೋಧಕರಾಗಿರುವ ಎರಡು ಸಂಶೋಧನಾ ಪ್ರಾಜೆಕ್ಟ್ ಗಳ ಅಡಿಯಲ್ಲಿ ನಾಲ್ಕು ಸಂಶೋಧನಾ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರಕಾರದ ಪರಿಸರ ಹಾಗೂ ಜೀವಿಶಾಸ್ತ್ರ ವಿಭಾಗ ಜೀವ ವೈವಿದ್ಯ ಮಂಡಳಿ ಧನ ಸಹಾಯದಲ್ಲಿ ಶೋಲಾ ಫಾರೆಸ್ಟ್-ಗ್ರಾಸ್ ಲ್ಯಾಂಡ್ ಕಾಂಪ್ಲೆಕ್ಸಸ್ ಆಫ್ ಕರ್ನಾಟಕ ಎಂಬ ಸಂಶೋಧನಾ ಯೋಜನೆಗೆ 3 ವರ್ಷಗಳ ಅವಧಿಗೆ ಹಾಗೂ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಧನ ಸಹಾಯದ ರಿಜುವಿನೇಶನ್ ಆಫ್ ರಿವರ್ ಕೃಷ್ಣಾ ಅಂಡ್ ಕಾವೇರಿ ತ್ರೂ ಫಾರೆಸ್ಟ್ರಿ ಇಂಟರ್ವೆನ್ಶನ್ ಎಂಬ ಸಂಶೋಧನಾ ಯೋಜನೆಗೆ ಒಂದು ವರ್ಷದ ಅವಧಿಗೆ ಜೂನಿಯರ್ ಪ್ರಾಜೆಕ್ಟ್ ಫೆಲೊ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಅರ್ಜಿ ಹಾಕ ಬಯಸುವ ಅಭ್ಯರ್ಥಿಗಳು ಪರಿಸರ ವಿಜ್ಞಾನ/ ಸಸ್ಯಶಾಸ್ತ್ರ/ ಅರಣ್ಯ/ವನ್ಯ ಜೀವಿ ವಿಜ್ಞಾನ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಒಟ್ಟು 4 ಜೂನಿಯರ್ ಪ್ರಾಜೆಕ್ಟ್ ಫೆಲೊ ಹುದ್ದೆಗಳಿಗೆ ಅರ್ಜಿ ಸಲ್ಲಿ ಬಹುದಾಗಿದ್ದು ಪ್ರತಿ ತಿಂಗಳು ರೂ.20,000 ಸಂಭಾವನೆಯನ್ನು ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು Application for recruitment of Research staff ಒಕ್ಕಣೆಯೊಂದಿಗೆ ವೈಯಕ್ತಿಕ ವಿವರ, ಹಾಗೂ ಸ್ನಾತಕೋತ್ತರ ಪದವಿ ಅಂಕ ಪಟ್ಟಿಗಳ ಪ್ರತಿಗಳನ್ನು ಜೂನ್ 24ರೊಳಗಾಗಿ nagenvi@gmail.com ಅಥವಾ bcnagaraja@bub.ernet.in ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿರುವ ಅದಿಸೂಚನೆ ನೋಡಬಹುದಾಗಿದೆ.








