ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಕೊರೊನಾ ವಿರುದ್ಧ ಧೈರ್ಯವಾಗಿ ಹೋರಾಡುತ್ತಿರೋ ವೈದ್ಯರುಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಇದಕ್ಕಾಗಿ ಅಪ್ಪು ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ ಬ್ರಾವೋ ಡಾಕ್ಟರ್ಸ್ ಬಳಸಿ ಹೊಸ ಹ್ಯಾಷ್ ಟ್ಯಾಗ್ ಚಾಲೆಂಜ್ ಶುರುಮಾಡಿದ್ದಾರೆ.
‘#ಬ್ರಾವೋ ಡಾಕ್ಟರ್ಸ್’ ದಯವಿಟ್ಟು ಈ ಹ್ಯಾಷ್ ಟ್ಯಾಗ್ ಶೇರ್ ಮಾಡಿ, ಕೊರೊನಾ ವಿರುದ್ಧ ದಿಟ್ಟವಾಗಿ ನಿಂತು ಹೋರಾಡ್ತಿರೋ ವೈದ್ಯ ಸಮೂಹಕ್ಕೆ ನಮ್ಮೆಲ್ಲರ ಕೃತಜ್ಞತೆಯನ್ನ ಸಲ್ಲಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ ಈ ಹ್ಯಾಷ್ ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದ್ದು ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸುತ್ತಿದ್ದಾರೆ.









