ಕೊಪ್ಪಳ: ಗಂಗಾವತಿ (Gangavathi) ತಾಲೂಕಿನ ಆನೆಗುಂದಿ (Anegundi) ಹತ್ತಿರದ ನವವೃಂದಾವನ ನಡುಗಡ್ಡೆಯಲ್ಲಿ ನೆಲೆಸಿರುವ ಪದ್ಮನಾಭ ತೀರ್ಥರ ಆರಾಧನೆಯನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠ ನಡೆಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ.
ಮೊದಲ ಒಂದೂವರೆ ದಿನ ರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಗುರುಗಳಾದ ಪದ್ಮನಾಭ ತೀರ್ಥರ ಆರಾಧನೆಯ ನಡೆಸುವಂತೆ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಅನುಮತಿ ನೀಡಿದೆ. ನ.26ರಂದು ಸುದೀರ್ಘ ಚರ್ಚೆ ನಡೆಸುವ ಮೂಲಕ ಅವಕಾಶವನ್ನು ನೀಡಿದೆ. ನ.29ರಂದು ಪೂರ್ತಿ ದಿನ ಪೂರ್ವರಾಧನೆ ಹಾಗೂ ನ.30ರಂದು ಮದ್ಯರಾಧನೆ ಮಧ್ಯಾಹ್ನದವರೆಗೆ ಅವಕಾಶವನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿದೆ. ಸುಪ್ರೀಂ ಕೋರ್ಟ್ನ ಆದೇಶದವರೆಗೂ ಈ ಆದೇಶ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲಾಗಿದೆ.