Politics : ರಾಷ್ಟ್ರ ದ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿರುವುದು ಕಾಂಗ್ರೆಸ್ ನ ದೌರ್ಬಲ್ಯತೆ ತೋರಿಸುತ್ತದೆ : ಆರಗ ಜ್ಞಾನೇಂದ್ರ
ಬೆಂಗಳೂರು : ಜಂಟಿ ಅಧಿವೇಶನದ ನಾಲ್ಕನೇ ದಿನವಾದ ಇಂದು ಕೂಡ ವಿಧಾನಸಭಾ ಕಲಾಪದ ವೇಲೆ ಗಲಾಟೆ ಗದ್ದಲ , ಆರೋಪ ಪ್ರತ್ಯಾರೋಪ ಜೋರಾಗಿಯೇ ಇತ್ತು.
ನಂತರ ಸುದ್ದಿಗಾರರ ಜೊತೆಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ವಿರುದ್ಧ ಗೃಹ ಸದನದ ದುರುಪಯೋಗದ ಆರೋಪ ಹೊರಿಸಿದ್ದಾರೆ..
ಹೌದು… ಪಕ್ಷದೊಳಗಿನ ನಾಯಕತ್ವ ಬಿಕ್ಕಟ್ಟನ್ನು ಮರೆ ಮಾಚಿ ಹುಸಿ ಒಗ್ಗಟ್ಟನ್ನು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ಸದನವನ್ನು ದುರುಪಯೋಗ ಪಡಿಸಿಕೊಳ್ಳವ ಹುನ್ನಾರ ನಡೆಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಅವರು ಆರೋಪಿಸಿದ್ದಾರೆ.
ಅಲ್ಲದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ದ್ವಜ ಹಾರಿಸಲು ಪ್ರಯತ್ನಿಸಿದ ನಾಗರಿಕರನ್ನು ಗುಂಡಿಟ್ಟು ಕೊಂದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕರು ಅದೇ ರಾಷ್ಟ್ರ ದ್ವಜವನ್ನು, ದ್ವಜ ಸಂಹಿತೆಗೆ ವಿರುದ್ಧವಾಗಿ ಸದನದಲ್ಲಿ ಪ್ರದರ್ಶಿಸಿದ್ದಾರೆ.
ರಾಷ್ಟ್ರ ದ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿರುವುದು, ಆ ಪಕ್ಷದ ದುರ್ಬಲ ಸ್ಥಿತಿ ಯನ್ನು ಪ್ರತಿಫಲಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಸಚಿವ ಕೆ ಎಸ್ ಈಶ್ವರಪ್ಪ ರವರಂಥ ಅಪ್ಪಟ ರಾಷ್ಟ್ರ ಪ್ರೇಮಿ ಹಾಗೂ ನಾಯಕರನ್ನು ಗುರಿಯಾಗಿಟ್ಟುಕೊಂಡು, ಕೆಸರೆರುಚುವ ವ್ಯರ್ಥ ಪ್ರಯತ್ನ ಬಿಟ್ಟು, ಕಾಂಗ್ರೆಸ್ ಶಾಸಕರು, ಸದನದ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಅಲ್ಲದೇ ರಾಜ್ಯಪಾಲರು, ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಣೆ, ಜನರ ಕುಂದು ಕೊರತೆಗಳ ನಿವಾರಣೆಗೆ ಬೆಳಕು ಚಲ್ಲುವಂತಹ. ವೇದಿಕೆಯನ್ನು, ರಾಜಕೀಯ ಅಂಗಳ ವನ್ನಾಗಿ ಮಾಡುತ್ತಿರುವುದು, ವಿಷಾದನೀಯ, ಎಂದರು.









