Shimogga : ಭಜರಂಗ ದಳದ ಕಾರ್ಯಕರ್ತನ ಬರ್ಬರ ಹತ್ಯೆ – ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಶಿವಮೊಗ್ಗ : ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣಕ್ಕೆ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ದುಷ್ಕರ್ಮಿಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಹರ್ಷನ ಮನೆಯವರ ಬಳಿ ಮಾತನಾಡಿ ಸಾಂತ್ವನ ಹೇಳಿದ್ದೆನೆ.
ಹರ್ಷನ ಸಾವು ದುರಾದೃಷ್ಟಕರ. ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ. ಆದರೆ, ಈಗಲೇ ಯಾರು ಎಂದು ಹೇಳುವುದಿಲ್ಲ. ಪೊಲೀಸರು ಆರೋಪಿಗಳನ್ನು ಬೆನ್ನತ್ತಿದ್ದಾರೆ. ಸದ್ಯದಲ್ಲೇ ಅವರನ್ನು ಬಂಧಿಸುತ್ತೆವೆ ಎಂದಿದ್ದಾರೆ…
ಅಲ್ಲದೇ ನಿನ್ನೆ ನಡೆದ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸುತ್ತೆನೆ. ಈ ಪ್ರಕರಣದ ಮೂಲಕ ಸ್ಪಷ್ಟವಾದ ಮೆಸೆಜ್ ಕೊಡುತ್ತೆವೆ. ದಯಮಾಡಿ ಜನರು ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ಕೆ.ಎಸ್.ಆರ್.ಪಿ. ಮತ್ತು ಆರ್.ಎ.ಎಫ್. ತುಕಡಿ ತರಿಸಲಾಗಿದೆ.
ಜನರು ಶಾಂತಿಯುತವಾಗಿ ಇರಬೇಕು. ನಿನ್ನೆ ರಾತ್ರಿ ಆಕ್ರೋಶಕ್ಕೆ ತುತ್ತಾಗಿ ಕೆಲವಾರು ಬೈಕ್ ಸುಟ್ಟಿದ್ದಾರೆ. ನಗರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೆವೆ ಎಂದಿದ್ದಾರೆ.









