Arecanut Export : ಅಡಿಕೆ ಆಮದು ದರದಲ್ಲಿ ಹೆಚ್ಚಳ..!!!
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಡಿಕೆ ಕ್ವಿಂಟಲ್‌ಗೆ 58 ರೂ. ಸಾವಿರ ಇತ್ತು. ವರ್ಷದ ಅಂತ್ಯಕ್ಕೆ 39 ರೂ. ಸಾವಿರಕ್ಕೆ ಇಳಿದಿದೆ. ಅಕ್ಕಪಕ್ಕದ ದೇಶಗಳಿಂದ ಕಡಿಮೆ ಗುಣಮಟ್ಟದ ಅಡಿಕೆ ಬಂದಿದ್ದರಿಂದ ಬೆಲೆ ಕುಸಿದಿದೆ ಎನ್ನುತ್ತಾ
ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತವನ್ನು ತಡೆಯಲು ಅಡಿಕೆಗೆ ಹೆಚ್ಚಿನ ಆಮದು ಸುಂಕವನ್ನು ವಿಧಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಹಿಂದೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು.. ಅಡಿಕೆಯ ಮೇಲಿನ ಆಮದು ಸುಂಕವನ್ನು ಹೆಚ್ಚಿಸಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸಿದ್ದರು.
ಅಂತೆಯೇ ಇದೀಗ ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ 251 ರಿಂದ 351 ರೂಪಾಯಿಗೆ ಹೆಚ್ಚಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆದೇಶ ಹೊರಡಿಸಿದೆ.
ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ಕೆಜಿಗೆ 351 ರೂಪಾಯಿಗಿಂತಲೂ ಹೆಚ್ಚಿನ ಬೆಲೆ ಕೊಡಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವ ಶೋಭಾ ಕರಂದ್ಲಾಜೆ ಅವರು ವಿದೇಶದಿಂದ ಕಡಿಮೆ ಬೆಲೆಗೆ ಅಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರರನ್ನು ಕಂಗೆಸಿಡಿಸಿತ್ತು. ನಮ್ಮ ರಾಜ್ಯದ ಅಡಿಕೆಯನ್ನು ಕಡಿಮೆ ಬೆಲೆಗೆ ಅಮದು ಆಗುತ್ತಿದ್ದ ಅಡಿಕೆ ತೀವ್ರವಾಗಿ ಬಾಧಿಸಿತ್ತು.
ಹೊರದೇಶಗಳಿಂದ ಆಮದಾಗುವ ಅಡಿಕೆಯ ಆಮದು ದರವನ್ನು ಹೆಚ್ಚಿಸಿದ್ದರಿಂದ ಬೆಳೆಗಾರರಿಗೆ ನ್ಯಾಯ ಸಿಗಲಿದೆ. ಇನ್ನು ಮುಂದೆ ಅಡಿಕೆ ಆಮದು ಮಾಡುವಾಗ ಪ್ರತಿ ಕೆಜಿಗೆ 351 ರೂಪಾಯಿಗಿಂತಲೂ ಹೆಚ್ಚಿನ ದರ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Arecanut : Increase in import Price








