ಅರ್ಜೆಂಟಿನಾದ ಸೂಪರ್ ಸ್ಟಾರ್ ಮೆಸ್ಸಿಗೆ ಏಳನೇ ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ
ವಿಶ್ವ ಫುಟ್ ಬಾಲ್ ನ ಸೂಪರ್ ಸ್ಟಾರ್, ಅರ್ಜೆಂಟಿನಾ ತಂಡದ ನಾಯಕ ಲಿಯೋನಲ್ ಮೆಸ್ಸಿ ಅವರು ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ದಾಖಲೆಯ ಏಳನೇ ಬಾರಿ ಪಡೆದುಕೊಂಡಿದ್ದಾರೆ.
ಈ ಮೂಲಕ ಲಿಯೊನಲ್ ಮೆಸ್ಸಿ ಅವರು ರಾಬರ್ಟ್ ಲೆವಾಂಡೊವಿಸ್ಕಿ ಮತ್ತು ಜೊರ್ಗಿನೊ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಮೆಸ್ಸಿ ಅವರು ಈ ಹಿಂದೆ 2009, 2010, 2011, 2012, 2015 ಮತ್ತು 2019ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಕಳೆದ ಜುಲೈ ನಲ್ಲಿ ನಡೆದಿದ್ದ ಕೊಪಾ ಅಮೆರಿಕಾ ಟ್ರೋಫಿಯನ್ನು ಲಿಯೊನಲ್ ಮೆಸ್ಸಿ ಅವರ ನಾಯಕತ್ವದಲ್ಲಿ ಅರ್ಜೆಂಟಿನಾ ತಂಡ ಗೆದ್ದುಕೊಂಡಿತ್ತು.
ಪ್ರತಿಷ್ಠಿತ ಪ್ರಶಸ್ತಿ ಮತ್ತೆ ಕೈ ಸೇರಿದ್ದು ಹೆಮ್ಮೆಯ ಜೊತೆಗೆ ಖುಷಿಯೂ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಈ ಪ್ರಶಸ್ತಿ ಕೊನೆಯದ್ದು ಅಂತ ಅಂದುಕೊಂಡಿದ್ದೆ. ಕೊಪಾ ಅಮೆರಿಕಾ
ಪ್ರಶಸ್ತಿ ಗೆದ್ದುಕೊಂಡಿರುವುದು ಈ ಪ್ರಶಸ್ತಿ ಪಡೆಯಲು ನೆರವಾಯ್ತು. ಈ ವರ್ಷ ನನಗೆ ಉತ್ತಮವಾಗಿತ್ತು ಎಂಬುದು ನನಗೆ ಗೊತ್ತಿಲ್ಲ. ನನ್ನ ಕ್ರೀಡಾ ಬದುಕು ತುಂಬಾನೇ ಸುದೀರ್ಘವಾದದ್ದು. ಈ ಪ್ರಶಸ್ತಿ ನನಗೆ ವಿಶೇಷವಾಗಿದೆ. ಹಲವು ಟೀಕೆಗಳ ನಡುವೆ, ಅರ್ಜೆಂಟಿನಾ ತಂಡ ಕೊಪಾ ಅಮೆರಿಕಾ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಬ್ಯಾಲನ್ ಡಿ ಓರ್ ಪ್ರಶಸ್ತಿ ನನಗೆ ಲಭಿಸಿದೆ ಎಂದು ಲಿಯೊನಲ್ ಮೆಸ್ಸಿ ಅವರು ಪ್ರಶಸ್ತಿ ಸ್ವೀಕರಿಸಿದ್ದ ಬಳಿಕ ಹೇಳಿದ್ರು.
ಮಹಿಳಾ ವಿಭಾಗದಲ್ಲಿ ಸ್ಪೇನ್ ನ ಮಿಡ್ ಫೀಲ್ಡರ್ ಅಲೆಕ್ಸಿಯಾ ಪುಟೆಲಾಸ್ ಅವರಿಗೆ ಬ್ಯಾಲನ್ ಡಿ ಓರ್ ಪ್ರಶಸ್ತಿ ಲಭಿಸಿದೆ.
ಬಾರ್ಸಿಲೋನಾ ತಂಡದ 19ರ ಹರೆಯದ ಭರವಸೆಯ ಆಟಗಾರ ಪೆಡ್ರಿ ಅವರಿಗೆ 21 ವಯೋಮಿತಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿದೆ.








