ಪಿಎಸ್ ಜಿ ಕ್ಲಬ್ ಸೇರಿದ ಮೆಸ್ಸಿಗೆ ಫ್ರಾನ್ಸ್ ನಲ್ಲಿ ಅಭಿಮಾನಿಗಳಿಂದ ಅದ್ಧೂರಿ ವೆಲ್ ಕಮ್..!
ಫ್ರಾನ್ಸ್ : ಅರ್ಜೆಂಟೀನಾದ ಸ್ಟಾರ್ ಫುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಇದೀಗ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ಫುಟ್ಬಾಲ್ ಕ್ಲಬ್ ಸೇರಿಕೊಳ್ಳುವುದಕ್ಕಾಗಿ ಫ್ರಾನ್ಸ್ ಗೆ ತೆರಳಿದ್ದಾರೆ.. ಅವರಿಗೆ ಅಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ..
ಫುಟ್ಬಾಲ್ ಕ್ಷೇತ್ರದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಗುರುತಿಸಿಕೊಂಡಿರುವ 34 ವರ್ಷದ ಮೆಸ್ಸಿ 6 ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ ವೋರ್ ಪ್ರಶಸ್ತಿ ಗೆದ್ದಿದ್ದಾರೆ.. ಮೆಸ್ಸಿ ಮುಂಬರುವ ದಿನಗಳಲ್ಲಿ ಶ್ರೀಮಂತ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಲಿದ್ದಾರೆ. ಇನ್ಮುಂದೆ ಪಿಎಸ್‌ಜಿಯಲ್ಲಿ ಮಿಂಚಲಿದ್ದಾರೆ.
ಪಿಎಸ್‌ಜಿಯಲ್ಲಿ ಈಗಾಗಲೇ ಸ್ಟಾರ್ ಆಟಗಾರರಿದ್ದಾರೆ. ಬ್ರೆಝಿಲ್ ಖ್ಯಾತ ಫುಟ್ಬಾಲಿಗ ನೇಮರ್ ಮತ್ತು ಫ್ರೆಂಚ್ ಯುವ ಆಟಗಾರ ಕೈಲಿಯನ್ ಎಂಬಪ್ಪೆ ಕೂಡ ಸದ್ಯ ಪಿಎಸ್‌ಜಿ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಲೆ ಬೊರ್ಗೆಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ಮೆಸ್ಸಿ ‘ದಿಸ್ ಈಸ್ ಪ್ಯಾರಿಸ್’ ಟಿ ಶರ್ಟ್ ಧರಿಸಿದ್ದರು. ವಿಮಾನ ನಿಲ್ದಾಣದ ಸಮೀಪ ಮೆಸ್ಸಿ ಗೆ ಜೈಕಾರ ಹಾಕುತ್ತಾ ಕಿರುಚಾಡುತ್ತಾ ಸಂಭ್ರಮಿಸುತ್ತಿದ್ದ ಅಭಿಮಾನಿಗಳತ್ತ ಮೆಸ್ಸಿ ಕೈ ಬೀಸಿ ಗ್ರೀಟ್ ಮಾಡಿದರು.






