Arjun Tendulkar | ಅರ್ಜುನ್ ತೆಂಡ್ಯೂಲ್ಕರ್ ಗೆ ಯಾಕೆ ಚಾನ್ಸ್ ಕೊಡಲಿಲ್ಲ..
ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಅವರ ಮಗ ಅರ್ಜುನ್ ತೆಂಡ್ಯೂಲ್ಕರ್ ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ಅರ್ಜುನ್ ತೆಂಡ್ಯೂಲ್ಕರ್ ಅವರನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಇದು ನಿರೀಕ್ಷಿತವೂ ಆಗಿತ್ತು.
ಆದ್ರೆ ಅರ್ಜುನ್ ಮುಂಬೈ ತಂಡದಲ್ಲಿದ್ದರೂ ಅವರನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸಲಿಲ್ಲ.
ಇದಾದ ಬಳಿಕ 2022ರ ಮೆಗಾ ಹರಾಜಿನಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅರ್ಜುನ್ ಅವರನ್ನ 30 ಲಕ್ಷ ರೂಪಾಯಿಗೆ ಖರೀದಿ ಮಾಡ್ತು.
ಈ ಸೀಸನ್ ನಲ್ಲಿ ಅರ್ಜುನ್ ತೆಂಡ್ಯೂಲ್ಕರ್ ಅವರನ್ನ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.
ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋಲುತ್ತಿದ್ದಂತೆ ಹೊಸ ಮುಖಗಳಿಗೆ ಚಾನ್ಸ್ ನೀಡುತ್ತಾ ಹೋಯ್ತು.
ಹೀಗಾಗಿ ಅರ್ಜುನ್ ತೆಂಡ್ಯೂಲ್ಕರ್ ಖಂಡಿತವಾಗಿ ಈ ಬಾರಿ ಐಪಿಎಲ್ ಗೆ ಎಂಟ್ರಿ ಕೊಡ್ತಾರೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಆ ನಿರೀಕ್ಷೆ ಹುಸಿಯಾಯ್ತು. ಈ ಸೀಸನ್ ನಲ್ಲೂ ಅರ್ಜುನ್ ತೆಂಡ್ಯೂಲ್ಕರ್ ಬೆಂಚ್ ಗೆ ಸೀಮಿತವಾದ್ರು.
ಹೀಗಾಗಿ ಮುಂಬೈ ಫ್ರಾಂಚೈಸಿ ಮೇಲೆ ಸಚಿನ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅವರನ್ನ ಆಡಿಸಲ್ಲ ಅಂದ್ರೆ ಯಾಕೆ ಖರೀದಿ ಮಾಡಬೇಕಾಯ್ತು..? ಬೇರೆ ಫ್ರಾಂಚೈಸಿ ಖರೀದಿಸಲು ಬಿಟ್ಟಿದ್ದರೇ ಅವರಿಗೆ ಚಾನ್ಸ್ ಸಿಗುತ್ತಿತ್ತು..? ಅಂತಾ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.

ಈ ನಡುವೆ ಐಪಿಎಲ್ 2022 ರಲ್ಲಿ ಅರ್ಜುನ್ ತೆಂಡೂಲ್ಕರ್ ಗೆ ಏಕೆ ಅವಕಾಶ ನೀಡಲಿಲ್ಲ ಎಂಬುದರ ಬಗ್ಗೆ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಬಹಿರಂಗಪಡಿಸಿದ್ದಾರೆ.
ಅರ್ಜುನ್ ಇನ್ನೂ ಉತ್ತಮವಾಗಬೇಕಿದೆ. ಯಾವುದೇ ಆಟಗಾರನಾದ್ರೂ ತಂಡಕ್ಕೆ ಬರೋದು ಒಂದು ಹಂತವಾಗಿರುತ್ತೆ. ಆ ನಂತರ ಪ್ಲೇಯಿಂಗ್ ಎಲೆವೆನ್ ನಲ್ಲಿ ಸ್ಥಾನ ಪಡೆಯೋದಕ್ಕೆ ತುಂಬಾ ಕಷ್ಟಪಡಬೇಕಾಗುತ್ತದೆ. ಅವರು ಇನ್ನೂ ಸಾಕಷ್ಟು ವರ್ಕೌಟ್ ಮಾಡಬೇಕಾಗಿದೆ.
ವಿಶೇಷವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಅವರು ಪರ್ಫೆಕ್ಟ್ ಆಗಬೇಕಾಗಿದೆ. ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ ಎಂದು ತಂಡ ಭಾವಿಸಿದರೆ, ನಾವು ಖಂಡಿತವಾಗಿಯೂ ಅವರಿಗೆ ಅವಕಾಶ ನೀಡುತ್ತೇವೆ, ಎಂದು ಶೇನ್ ಬಾಂಡ್ ಹೇಳಿದ್ದಾರೆ.
ಇನ್ನು 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ.
ಬರೋಬ್ಬರಿ ಸತತ ಎಂಟು ಪಂದ್ಯಗಳಲ್ಲಿ ಸೋಲು ಕಂಡು ಐಪಿಎಲ್ ನಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಈ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ 14 ಪಂದ್ಯಗಳನ್ನಾಡಿದೆ. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ 10 ಪಂದ್ಯಗಳಲ್ಲಿ ಸೋಲು ಕಂಡಿದೆ.
ಈ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಗೆ ಆಟಗಾರರ ಗಾಯದ ಸಮಸ್ಯೆ ತಂಡಕ್ಕೆ ಹೆಚ್ಚು ಹೊಡೆತ ನೀಡ್ತು. ಹಾಗೆ ಸ್ಟಾರ್ ಆಟಗಾರರು ಕೂಡ ಕೈಕೊಟ್ಟರು.








