ಅರ್ಜುನ್ ತೆಂಡುಲ್ಕರ್ ಆಲ್ ರೌಂಡ್ ಆಟಕ್ಕೆ ಬೆಲೆ ಸಿಗಬಹುದಾ…?
2021ರ ಐಪಿಎಲ್ ಹರಾಜಿನಲ್ಲಿ ಎಲ್ಲರ ಕಣ್ಣು ಅರ್ಜುನ್ ತೆಂಡುಲ್ಕರ್ ಮೇಲೆ ಬಿದ್ದಿದೆ. ಫ್ರಾಂಚೈಸಿ ಪಂಟರ್ ಗಳು ಖರೀದಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಅರ್ಜುನ್ ತೆಂಡುಲ್ಕರ್ ಮಾತ್ರ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ.
ಕಾರಣ ಇಷ್ಟೇ. ಅರ್ಜುನ್ ಹೆಸರಿನ ಮುಂದೆ ತೆಂಡುಲ್ಕರ್ ಅನ್ನೋ ಟ್ಯಾಗ್ ಲೈನ್ ಇದೆ. ಹೀಗಾಗಿ ಸಚಿನ್ ತೆಂಡುಲ್ಕರ್ ಮಗ ಅನ್ನೋ ಕಾರಣಕ್ಕೆ ಅರ್ಜುನ್ ತೆಂಡುಲ್ಕರ್ ಸುದ್ದಿಯಲ್ಲಿದ್ದಾರೆ.
ಈಗಾಗಲೇ ಅರ್ಜುನ್ ತೆಂಡುಲ್ಕರ್ ಹೆಸರು ಐಪಿಎಲ್ ಹರಾಜಿನ ಫೈನಲ್ ಲೀಸ್ಟ್ ನಲ್ಲಿದೆ. ಅಲ್ಲದೆ ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಆದ್ರೂ ಸಚಿನ್ ಮಗನಿಗೆ ಕ್ರಿಕೆಟ್ ಪ್ರತಿಭೆ ಇಲ್ವಾ ? ಸಚಿನ್ ಪ್ರಭಾವದಿಂದ ಹರಾಜಿನ ಲೀಸ್ಟ್ ನಲ್ಲಿರೋದು ಅಂತೆಲ್ಲಾ ಮಾತುಗಳಿಗೆ ಅರ್ಜುನ್ ತೆಂಡುಲ್ಕರ್ ಉತ್ತರ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಕ್ಲಬ್ ಪಂದ್ಯವೊಂದರಲ್ಲಿ ಅರ್ಜುನ್ ತೆಂಡುಲ್ಕರ್ ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ.
21ರ ಹರೆಯದ ಅರ್ಜುನ್ ತೆಂಡುಲ್ಕರ್ 26 ಎಸೆತಗಳಲ್ಲಿ 77 ರನ್ ಹಾಗೂ ಮೂರು ವಿಕೆಟ್ ಉರುಳಿಸಿದ್ದಾರೆ. 26 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಐದು ಬೌಂಡರಿ ಹಾಗೂ 40ಕ್ಕೆ ಮೂರು ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪೊಲೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ಅರ್ಜುನ್ ತೆಂಡುಲ್ಕರ್ ಎಮ್ ಯಜಿ ಕ್ಲಬ್ ಪರ ಆಡಿದ್ದರು. ಅಷ್ಟೇ ಅಲ್ಲ, ಇಸ್ಲಾಂ ಜಿಮ್ಖಾನ ವಿರುದ್ಧ ಅರ್ಜುನ್ ತೆಂಡುಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದರು.
45 ಓವರ್ ಗಳ ಪಂದ್ಯದಲ್ಲಿ ಎಮ್ ಐಜಿ ಕ್ಲಬ್ ತಂಡ ಏಳು ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತ್ತು. ಎಮ್ ಐಜಿ ಕ್ಲಬ್ ತಂಡದ ಪರ ಅರ್ಜುನ್ ತೆಂಡುಲ್ಕರ್ 77 ರನ್ ಹಾಗೂ ನಾಯಕ ಕೇವಿನ್ ಡಿ ಆಲ್ಮೆಡಾ ಅವರು 96 ರನ್ ಸಿಡಿಸಿದ್ರು. ಇದಕ್ಕುತ್ತರವಾಗಿ ಇಸ್ಲಾಂ ಜಿಮ್ಖಾನ 41.4 ಓವರ್ ಗಳಲ್ಲಿ 191 ರನ್ ಗಳಿಸಿ ಸೋಲು ಅನುಭವಿಸಿತ್ತು.
ಅಂದ ಹಾಗೇ ಐಪಿಎಲ್ ಹರಾಜಿನಲ್ಲಿ ಅರ್ಜುನ್ ತೆಂಡುಲ್ಕರ್ ಅವರ ಮೂಲ ಬೆಲೆ 20 ಲಕ್ಷ ರೂ.