ಐಪಿಎಲ್ ಗೆ ಅರ್ಜುನ್ ತೆಂಡುಲ್ಕರ್ ಅರ್ಹತೆ… ಸಾಮಾಜಿಕ ಜಾಲ ತಾಣದಲ್ಲಿ ಸಚಿನ್ ಗೆ ಬೌನ್ಸರ್ ಪ್ರಶ್ನೆಗಳು ಪಕ್ಕಾ..!
ಮತ್ತೊಮ್ಮೆ ಸಚಿನ್ ತೆಂಡುಲ್ಕರ್ ವಿರುದ್ಧ ಮತ್ತೆ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳು, ಆರೋಪಗಳು ಬರುವುದು ಖಂಡಿತ. ಇದರಲ್ಲಿ ಸಂಶಯವೇ ಇಲ್ಲ. ಯಾಕಂದ್ರೆ ಈ ಒಂದು ವಿಚಾರಕ್ಕೆ…!
ರೈತರ ಹೋರಾಟದ ಬಗ್ಗೆ ಸಚಿನ್ ತೆಂಡುಲ್ಕರ್ ಮಾತನಾಡಿಲ್ಲ. ಆದ್ರೆ ರಿಹಾನಾ ಟ್ವಿಟ್ ಬಗ್ಗೆ ಮಾತನಾಡಿ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಅಷ್ಟೇ ಅಲ್ಲ, ಸಚಿನ್ ವ್ಯಕ್ತಿತ್ವ, ಸಾಧನೆಯನ್ನು ಕೂಡ ಪ್ರಶ್ನೆ ಮಾಡಿದ್ದರು.
ಇದೀಗ ಸಚಿನ್ ಮಗ ಅರ್ಜುನ್ ತೆಂಡುಲ್ಕರ್ ಐಪಿಎಲ್ ಹರಾಜಿನ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ. ಹೀಗಾಗಿ ಸಚಿನ್ ತೆಂಡುಲ್ಕರ್ ವಿರುದ್ಧ ಪ್ರಹಾರಗಳು ಬರೋದು ಪಕ್ಕಾ.
ಸಚಿನ್ ತೆಂಡುಲ್ಕರ್ ಮಗನ ಆಯ್ಕೆಗೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂಬಾನಿ ಪ್ರಭಾವ ಬೀರುತ್ತಿದ್ದಾರೆ ಅನ್ನೋದು ಕೇವಲ ಭ್ರಮೆಯಷ್ಟೇ..
ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಮಗನ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿಯಾಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ, ಅಮಿತ್ ಶಾ ಮಗ ಜೈ ಶಾ ಆಗಲಿ ಅಥವಾ ಮುಖೇಶ್ ಅಂಬಾನಿ ಆಗಲಿ ಮಾಡುತ್ತಿಲ್ಲ.
ಐಪಿಎಲ್ ನಲ್ಲಿ ಆಡಬೇಕಾದ್ರೆ ಕೆಲವೊಂದು ನಿಯಮಗಳಿವೆ. ಈ ನಿಯಮಗಳ ಪ್ರಕಾರ ಅರ್ಹತೆ ಪಡೆದುಕೊಂಡ್ರೆ ಮಾತ್ರ ಹರಾಜಿನಲ್ಲಿ ಆಟಗಾರರು ಭಾಗಿಯಾಗಬಹುದು. ಆ ನಂತರ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅಲ್ಲಿ ಯಾವ ಮೋದಿಯೂ ಬರಲ್ಲ. ಅಮಿತ್ ಶಾ ನೂ ಬರಲ್ಲ.. ಅಂಬಾನಿಯೂ ಬರಲ್ಲ..!
ಹಾಗೇ ಸ್ಥಳೀಯ ಫ್ರಾಂಚೈಸಿಗಳು ಸ್ಥಳೀಯ ಯುವ ಆಟಗಾರರಿಗೆ ಅವಕಾಶ ನೀಡಬೇಕು. ಆದ್ರೆ ಕೆಲವೊಂದು ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ಹಾಗೇ ನೋಡಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಮಂದಿ ಕನ್ನಡಿಗರಿಗೆ ಅವಕಾಶ ನೀಡಿದೆ. ಆರ್ ಸಿಬಿ ಐಪಿಎಲ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೂ ನಮ್ಮ ಕನ್ನಡದ ಆಟಗಾರರು ಬೇರೆ ಫ್ರಾಂಚೈಸಿಗಳಲ್ಲಿ ಆಡುವಂತಹ ಪರಿಸ್ಥಿತಿ ಇದೆ. ಯಾಕಂದ್ರೆ ಇದು ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರವಾಗಿದೆ.
ಅದು ಏನೇ ಇರಲಿ, ಅರ್ಜುನ್ ತೆಂಡುಲ್ಕರ್ ವಿವಿಧ ವಯೋಮಿತಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿದ್ರೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ಮುಂಬೈ ತಂಡದ ಪರ ವಿವಿಧ ವಯೋಮಿತಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಆದ್ರೆ ಅರ್ಜುನ್ ತೆಂಡುಲ್ಕರ್ ಕೆರಿಯರ್ ಗೆ ಸಚಿನ್ ತೆಂಡುಲ್ಕರ್ ಅನ್ನೋ ಟ್ಯಾಗ್ ಲೈನ್ ಮಾರಕವಾಗಿ ಪರಿಣಮಿಸುತ್ತಿದೆ.
ಅರ್ಜುನ್ ತೆಂಡುಲ್ಕರ್ ಗೆ 20 ಲಕ್ಷ ರೂಪಾಯಿ ಬೇಸಿಕ್ ಪ್ರೈಸ್ ಆಗಿದೆ. ಆಲ್ ರೌಂಡರ್ ಆಗಿರುವ ಅರ್ಜುನ್ ತೆಂಡುಲ್ಕರ್ ಗೆ ಇನ್ನಷ್ಟು ಕಲಿಯಲು ಐಪಿಎಲ್ ಉತ್ತಮ ವೇದಿಕೆಯಾಗಿದೆ.
ಒಂದಂತೂ ನಿಜ, ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವಂತಹ ಸಾಧ್ಯತೆಗಳಿವೆ. ಯಾಕಂದ್ರೆ ಒಂದು ಅಂಬಾನಿ ತಂಡ, ಸಚಿನ್ ತೆಂಡುಲ್ಕರ್ ಕೂಡ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿದ್ದಾರೆ. ಹಾಗೇ ಸ್ಥಳೀಯ ಆಟಗಾರನು ಆಗಿದ್ದಾರೆ.
ಆದ್ರೆ ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ರೆ ಆರೋಪಗಳು, ಟೀಕೆಗಳು ಬರಬಹುದು ಅನ್ನೋ ಕಾರಣಕ್ಕೆ ಬೇರೆ ಫ್ರಾಂಚೈಸಿಗಳು ಖರೀದಿ ಮಾಡಿದ್ರೂ ಅಚ್ಚರಿ ಏನಿಲ್ಲ. ಹಾಗೇ ಬಿಡ್ಡಿಂಗ್ ನಲ್ಲಿ ಯಾರು ಕೂಡ ಖರೀದಿ ಮಾಡದೇ ಇರಬಹುದು. ಆಗ ಮಾತ್ರ ಸಚಿನ್ ತೆಂಡುಲ್ಕರ್ ಗೆ ಅವಮಾನವಾಗಬಹುದು.
ಒಟ್ಟಿನಲ್ಲಿ ಅರ್ಜುನ್ ತೆಂಡುಲ್ಕರ್ ಐಪಿಎಲ್ ಗೆ ಎಂಟ್ರಿಯಾಗಿರುವುದಕ್ಕೆ ಸಚಿನ್ ತೆಂಡುಲ್ಕರ್ ಗೆ ಸಾಮಾಜಿಕ ಜಾಲ ತಾಣದಲ್ಲಿ ಬೌನ್ಸರ್, ಗೂಗ್ಲಿಯಂತಹ ಮಾರಕ ಪ್ರಶ್ನೆಗಳು, ಟೀಕೆಗಳಿಗೆ ಕೇಳಿಬರಹುದು.








