ಐಪಿಎಲ್ 2021- ಹರಾಜು ಲಿಸ್ಟ್ ಫೈನಲ್.. ಶ್ರೀಶಾಂತ್- ಅರ್ಜುನ್ ತೆಂಡುಲ್ಕರ್ ನೋಂದಣಿ..!
2021ರ ಐಪಿಎಲ್ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈ ನಡೆಯಲಿದೆ. ಈಗಾಗಲೇ ಐಪಿಎಲ್ ಹರಾಜಿನಲ್ಲಿ ಭಾಗಿಯಾಗುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್, ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತಿ ಪಡೆದಿರುವ ಕೇರಳ ಎಕ್ಸ್ ಪ್ರೆಸ್ ಶ್ರೀಶಾಂತ್ ಹರಾಜು ಲಿಸ್ಟ್ ನಲ್ಲಿದ್ದಾರೆ.
ಅರ್ಜುನ್ ತೆಂಡುಲ್ಕರ್ 20 ಲಕ್ಷ ರೂಪಾಯಿ ಮೂಲ ಬೆಲೆ ಹಾಗೂ ಶ್ರೀಶಾಂತ್ 75 ಲಕ್ಷ ರೂಪಾಯಿ ಮೂಲ ಬೆಲೆಯಾಗಿದೆ.
ಈ ಬಾರಿಯ ಹರಾಜಿನಲ್ಲಿ ಒಟ್ಟು 1097 ಆಟಗಾರರ ಹೆಸರುಗಳಿವೆ. ಈ ಪೈಕಿ 814 ಮಂದಿ ಭಾರತೀಯ ಆಟಗಾರರು ಮತ್ತು 283 ವಿದೇಶಿ ಆಟಗಾರರು ಇದ್ದಾರೆ.
ಇದರಲ್ಲಿ ವೆಸ್ಟ್ ಇಂಡೀಸ್ ನ 56 ಆಟಗಾರರು, ಆಸ್ಟ್ರೇಲಿಯಾದ 42 ಆಟಗಾರರು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಇನ್ನುಳಿದಂತೆ ಆಫಘಾನಿಸ್ತಾನದ 30 ಆಟಗಾರರು, ಬಾಂಗ್ಲಾ ದೇಶದ ಐದು ಆಟಗಾರರು, ಇಂಗ್ಲೆಂಡ್ ನ 21 ಆಟಗಾರರು, ಐರ್ಲೆಂಡ್ ನ 2 ಆಟಗಾರರು, ನೇಪಾಳದ 8 ಆಟಗಾರರು, ನೆದರ್ಲೆಂಡ್ ನ ಓರ್ವ ಆಟಗಾರ, ನ್ಯೂಜಿಲೆಂಡ್ ನ 29 ಆಟಗಾರರು, ಸ್ಕಾಟ್ ಲೆಂಡ್ ನ 7 ಆಟಗಾರರು, ದಕ್ಷಿಣ ಆಫ್ರಿಕಾದ 38 ಆಟಗಾರರು, ಶ್ರೀಲಂಕಾದ 31 ಆಟಗಾರರು, ಯುಎಇನ 9 ಆಟಗಾರರು, ಅಮೆರಿಕಾದ 2 ಆಟಗಾರರು, ಜಿಂಬಾಬ್ವೆಯ 2 ಆಟಗಾರರ ಹೆಸರುಗಳು ಹರಾಜಿನ ಲಿಸ್ಟ್ ನಲ್ಲಿವೆ.
ಇನ್ನು ಲಿಸ್ಟ್ ನಲ್ಲಿ ಭಾರತದ 21 ಮಂದಿ ಅಂತಾರಾಷ್ಟ್ರೀಯ ಆಟಗಾರರು ಸೇರಿದಂತೆ ಒಟ್ಟು 207 ಮಂದಿ ಇದ್ದಾರೆ.
ಹಾಗೇ, ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಚೇತೇಶ್ವರ ಪೂಜಾರ ಮೂಲ ಬೆಲೆ 50 ಲಕ್ಷ ಹಾಗೂ
ಹನುಮ ವಿಹಾರಿಯ ಮೂಲ ಬೆಲೆ 1 ಕೋಟಿ ರೂಪಾಯಿಯಾಗಿದ್ದು, ಇವರಿಬ್ಬರು ಈ ಬಾರಿಯ ಹರಾಜಿನ ಲಿಸ್ಟ್ ನಲ್ಲಿದ್ದಾರೆ. ಹಾಗೇ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಸ್ಟೀವನ್ ಸ್ಮಿತ್, ಗ್ಲೇನ್ ಮ್ಯಾಕ್ಸ್ ವೆಲ್, ಮೋಯಿನ್ ಆಲಿ, ಸ್ಯಾಮ್ ಬಿಲ್ಲಿಂಗ್ಸ್, ಜೇಸನ್ ರಾಯ್, ಮಾರ್ಕ್ ವುಡ್ ಮೊದಲಾದ ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿಯಾಗಿದೆ.
ಆದ್ರೆ ಟಿ-ಟ್ವೆಂಟಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ಇಂಗ್ಲೆಂಡ್ ನ ಡೇವಿಡ್ ಮಲಾನ್ ಅವರ ಮೂಲ ಬೆಲೆ 1.5 ಕೋಟಿಯಾಗಿದೆ. ಈ ನಡುವೆ, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜಾಯ್ ರೂಟ್ ಮತ್ತು ಆಸ್ಟ್ರೇಲಿಯಾದ ವೇಗಿ ಮಿಟ್ಚೆಲ್ ಸ್ಟಾರ್ಕ್ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ.