ಅಸ್ಸಾಂನ ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ – 60 ಲಕ್ಷ ರೂ ದೋಚಿದ ಶಸ್ತ್ರಸಜ್ಜಿತ ದರೋಡೆಕೋರರು Armed robbers looted
ನಲ್ಬಾರಿ, ನವೆಂಬರ್22: ಅಸ್ಸಾಂನ ನಲ್ಬಾರಿ ಜಿಲ್ಲೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ ಶಸ್ತ್ರಸಜ್ಜಿತ ದರೋಡೆಕೋರರು ಸುಮಾರು 60 ಲಕ್ಷ ರೂ ದೋಚಿದ ಘಟನೆ ವರದಿಯಾಗಿದೆ. ಘಟನೆ ವೇಳೆ ಶೂಟಿಂಗ್ನಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. Armed robbers looted

ಜಿಲ್ಲೆಯ ನಲ್ಬರಿಯಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಅಮಯಾಪುರದ ಬ್ಯಾಂಕಿನ ಶಾಖೆಯಲ್ಲಿ ಮಧ್ಯಾಹ್ನ 12: 30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನರಾ ಬ್ಯಾಂಕ್ – ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಆನ್ಲೈನ್ ಅರ್ಜಿಗಳ ಆಹ್ವಾನ
ಪ್ರಾಥಮಿಕ ತನಿಖೆಯ ಪ್ರಕಾರ, ಕನಿಷ್ಠ ನಾಲ್ಕು ದರೋಡೆಕೋರರು ಮೋಟಾರು ಬೈಕ್ಗಳಲ್ಲಿ ಬಂದು ಶಾಖೆಯನ್ನು ಪ್ರವೇಶಿಸಿದರು. ಅವರು ಶಾಖಾ ವ್ಯವಸ್ಥಾಪಕರನ್ನು ಹಿಡಿದಿರಿಸಿಕೊಂಡು, ಅವರಿಂದ ಹಣವನ್ನು ಪಡೆದು ಪಲಾಯನ ಮಾಡಿದರು ಎಂದು ನಲ್ಬರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಾಂಜಿತ್ ಕೌರ್ ಹೇಳಿದರು.
ಬ್ಯಾಂಕಿನಿಂದ ಹೊರಬಂದ ದರೋಡೆಕೋರರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲಾರಂಭಿಸಿದರು. ಇದರಲ್ಲಿ ಒಬ್ಬ ವ್ಯಕ್ತಿಯ ಕಾಲಿಗೆ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ.

ಕೂಡಲೇ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಗುವಾಹಟಿಗೆ ಸ್ಥಳಾಂತರಿಸಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ತನಿಖೆ ನಡೆಯುತ್ತಿದೆ ಮತ್ತು ದರೋಡೆ ಮಾಡಿದ ವ್ಯಕ್ತಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಂದು ಕೌರ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1330187534849220610?s=19
https://twitter.com/SaakshaTv/status/1330187878652125189?s=19
https://twitter.com/SaakshaTv/status/1330188116712435712?s=19








