ಸೇನಾ ಹೆಲಿಕಾಪ್ಟರ್ ಪತನ | ಅಪಾಯದಿಂದ ಪಾರಾದ ಪೈಲಟ್ – Saaksha Tv
ಜಮ್ಮು-ಕಾಶ್ಮೀರ : ಸೇನಾ ಹೆಲಿಕಾಪ್ಟರ್ ಒಂದು ಪತನಗೊಂಡಿರುವ ಘಟನೆ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಕಣಿವೆಯ ತುಲೈಲ್ ಕ್ವಾರ್ಟರ್ನಲ್ಲಿರುವ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಘಟನೆ ಸಂಭವಿಸಿದ್ದು ಮಾಹಿತಿಯ ಪ್ರಕಾರ ಪೈಲಟ್ ಹಾಗೂ ಸಹ ಪೈಲಟ್ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಅವರನ್ನು ಹುಡುಕುವಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಸೇನಾ ಹೆಲಕಾಪ್ಟರ್ನೊಂದಿಗಿನ ಸಂಪರ್ಕ ಕಡಿತಗೊಂಡಿದೆ. ನಾವು ಮಾಹಿತಿಯನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎಸ್ಡಿಎಂ ಗುರೇಜ್ ತಿಳಿಸಿದ್ದಾರೆ.








