ಮಾಜಿ ಪೊಲೀಸ್ ಅಧಿಕಾರಿ ಅರೆಸ್ಟ್ Saaksha Tv
ಚಂಡೀಗಢ: ಪಂಜಾಬ್‍ನ ಮಾಜಿ ಪೊಲೀಸ್ ಅಧಿಕಾರಿಗೆ ಕೇಂದ್ರೀಯ ತನಿಖಾ ದಳದ(ಸಿಬಿಐ)ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ನೀಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಬಂಧಿತ ಆರೋಪಿ ಮಾಜಿ ಪೊಲೀಸ್ ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಎಂದು ತಿಳಿದು ಬಂದಿದೆ. ಇವರು 1991ರಲ್ಲಿ ಮೇಜರ್ ಸಿಂಗ್ ಅವರು ಪೊಲೀಸ್ ಸ್ಟೇಷನ್ ಹೌಸ್ ಎಚ್‍ಒ ಆಗಿದ್ದ ತರ್ನ್ ತರಣ್ ಅವರ ಜೊತೆ ಸಂತೋಖ್ ಸಿಂಗ್ ಅವರನ್ನು ಅಪಹರಣ ಮಾಡಿ ಹತ್ಯೆ ಮಾಡಿದ್ದರು.
ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಮತ್ತು 50 ಸಾವಿರ ರೂ. ದಂಡ ಹಾಕಿದೆ. ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಮೇಲೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.









