ಲಷ್ಕರ್-ಎ-ತೊಯ್ಬಾದ 6 ಉಗ್ರರ ಬಂಧನ
ಜಮ್ಮು&ಕಾಶ್ಮೀರ: ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಇರಿಸಿಕೊಂಡು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಆರು ಮಂದಿಯನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು ಪುಲ್ವಾಮದ ಲೆಲ್ಹರ್ ಕಾಕಪೋರಾ ನಿವಾಸಿ ರೂಫ್ ಅಹ್ಮದ್ ಲೋನ್, ಆಲೋಚಿಬಾಗ್ ಪಾಂಪೊರೆ ನಿವಾಸಿ ಆಕಿಬ್ ಮಕ್ಬೂಲ್ ಭಟ್, ಲಾರ್ವೆ ಕಾಕಪೋರಾ ನಿವಾಸಿಗಳಾದ ಜಾವೇದ್ ಅಹ್ಮದ್ ದಾರ್,ಸಜಾದ್ ಅಹ್ಮದ್ ದಾರ್, ಪುಲ್ವಾಮದ ಪರಿಗಾಮ್ ನಿವಾಸಿಗಳಾದ ಅರ್ಷಿದ್ ಅಹ್ಮದ್ ಮಿರ್, ರಮೀಜ್ ರಾಜಾನ್ನು ಬಂಧಿಸಿದ್ದಾರೆ.
Joint Parties of Baramulla Police, Army 2 RR and 176 Bn CRPF arrests terrorist associate of LET outfit alongwith 1 hand grenade, 2 AK 47magazines & 20 live rounds at Karhama Kunzer, District Baramulla during CASO. @JmuKmrPolice @KashmirPolice pic.twitter.com/lQOPmwRzcQ
— Baramulla Police (بارہمولہ پولیس) (@BaramullaPolice) March 17, 2022
ಬಂಧಿತರು ಉಗ್ರರಿಗೆ ಆಶ್ರಯ ನೀಡಿದ್ದಲ್ಲದೆ, ಹಣಕಾಸು ಸಹಾಯ, ಹಣ ವರ್ಗಾವಣೆ ಗೆ ಸಹಾಯ ಮಾಡುತ್ತಿದ್ದುದಲ್ಲದೆ ಯುವಕರನ್ನು ಉಗ್ರ ಚಟುವಟಿಕೆಗೆ ಸೆಳೆಯುವ ಕೃತ್ಯದಲ್ಲಿ ತೊಡಗಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತರು ಎಲ್ಇಟಿಯ ಭಯೋತ್ಪಾದಕ ಕಮಾಂಡರ್ ರಿಯಾಜ್ ಅಹ್ಮದ್ ದಾರ್ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಅತನೊಂದಿಗೆ ನಿರಂತರ ಸಂಪರ್ಕದಲಿದ್ದು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.