ಮಂಗಳೂರು : ಸೇತುವೆ ಊರುಗಳನ್ನು ಜೋಡಿಸಬೇಕು. ಹಾಗಾಗಿ ಸೇತುವೆಗೆ ವಿಭಜಿಸುವ ಹೆಸರು ಇಡಬಾರದು ಎಂದು ಮಾಜಿ ಸಚಿವ ಯು.ಟಿ ಖಾದರ್ ಯಲಹಂಕ ಸೇತುವೆಗೆ ವೀರ್ ಸಾವರ್ಕರ್ ಹೆಸರು ಇಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಮಾತನಾಡಿದ ಯ.ಟಿ.ಖಾದರ್, ನಾನು ಯಲಹಂಕ ಸೇತುವೆ ಮೇಲೆ ಹೋದಾಗ ಸ್ವಾಮಿ ವಿವೇಕಾನಂದ ಹೆಸರು ಹೇಳುತ್ತೇನೆ. ಇಂದಿರಾ ಗಾಂಧಿ ಸರ್ಕಾರ ಸಾವರ್ಕರ್ ಸ್ಟ್ಯಾಂಪ್ ತಂದಿದ್ದರು.ಬಿಜೆಪಿ ಯಾಕೆ ಈಗ ಆ ಸ್ಟ್ಯಾಂಪ್ ಬಳಸುತ್ತಿಲ್ಲ ಎಂದು ಬಿಜೆಪಿ ನಡೆಯನ್ನು ಪ್ರಶ್ನಿಸಿದರು. ಇದೆ ವೇಳೆ ಪಂಪ್ವಲ್ ಫ್ಲೈ ಓವರ್ ಮೇಲೆ ವೀರ ಸಾವರ್ಕರ್ ಹೆಸರಿನ ಬ್ಯಾನರ್ ವಿಚಾರವಾಗಿ ಮಾತನಾಡಿದ ಅವರು,
ಪಂಪ್ವಲ್ ಫ್ಲೈ ಓವರ್ ಗೆ ಮಹಾವೀರ ಸರ್ಕಲ್ ಅಂತಾ ಹೆಸರಿದೆ. ಫ್ಲೆಕ್ಸ್ ಪ್ರಿಂಟ್ ಮಾಡಿದವರನ್ನು ಅರೆಸ್ಟ್ ಮಾಡಬೇಕು. ಬ್ಯಾನರ್ ಅಳವಡಿಸಿದವರನ್ನು ಬಂಧನ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.








