Arun Singh | ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ
ಕಲಬುರಗಿ : ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ ಆಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪದ ಬಗ್ಗೆ ಕಲಬುರಗಿಯಲ್ಲಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ ನಡೆದಿದೆ.
ನೂರು ಇಲಿ ತಿಂದು ಬೆಕ್ಕು ಹಜ್ ಗೆ ಹೋಗಿತ್ತಂತೆ, ಅನ್ನೋ ಹಾಗಿದೆ ಸಿದ್ದರಾಮಯ್ಯ ಮಾತು ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪಡಿತರ ಹಂಚಿಕೆ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಸೇರಿ ಅನೇಕ ಹಗರಣ ನಡೆದಿವೆ ಎಂದು ಆರೋಪಿಸಿದ ಅರುಣ್ ಸಿಂಗ್, ಸಿದ್ದರಾಮಯ್ಯ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು.
ಸಿಎಂ ಬೊಮ್ಮಾಯಿ, ಕಾಮನ್ ಮ್ಯಾನ್ ಆಗಿದ್ದಾರೆ. ನಮ್ಮ ಸಿಎಂ ಸಾಮಾನ್ಯ ವ್ಯಕ್ತಿ ಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಮುಖ್ಯಮಂತ್ರಿ ಮತ್ತು ರಾಜ್ಯದ ಗೌರವವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ.
ದೇಶದ ವಿವಿಧಡೆ ಕಾಂಗ್ರೆಸ್ ನಲ್ಲಿ ಜಗಳ ವಾಗುತ್ತಿವೆ. ಹಾಗೇನೇ ಕರ್ನಾಟಕ ದಲ್ಲಿ ಕೂಡಾ ಕೈ ನಾಯಕರ ನಡುವೆ ಜಗಳವಾಗುತ್ತದೆ ಎಂದಿದ್ದಾರೆ.









