Arunachal Pradesh : 640 ಕೋಟಿ ವಚ್ಚದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದು ಅರುಣಾಚಲದ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು, ಇದನ್ನು ಡೋನಿ ಪೋಲೋ ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ. ಇಟಾನಗರದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು 640 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಜೊತೆಗೆ, ಇಟಾನಗರದಲ್ಲಿ 600 MW ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಾವು ಕಾರ್ಮಿಕ ಸಂಸ್ಕೃತಿಯನ್ನು ತಂದಿದ್ದೇವೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ, ನಾವು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ನಾವೇ ಉದ್ಘಾಟಿಸುತ್ತೇವೆ. ನಮ್ಮ ಕೆಲಸ ನಿಲ್ಲಿಸುವ ಮುಂದೂಡುವ ಯುಗ ಕಳೆದು ಹೋಗಿದೆ ಎಂದು ತಿಳಿಸಿದ್ದಾರೆ.
ಅಟಲ್ ಜಿ ಅವರ ಸರ್ಕಾರ ಈಶಾನ್ಯ ಅಭಿವೃದ್ಧಿಗೆ ಪ್ರಯತ್ನಿಸಿತ್ತು.
ಸ್ವಾತಂತ್ರ್ಯದ ನಂತರ, ಈಶಾನ್ಯವು ವಿಭಿನ್ನ ಯುಗಕ್ಕೆ ಸಾಕ್ಷಿಯಾಯಿತು. ಈ ಪ್ರದೇಶವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ, ಅಟಲ್ ಜಿ ಅವರ ಸರ್ಕಾರ ಬಂದಾಗ, ಮೊದಲ ಬಾರಿಗೆ ಅದನ್ನು ಬದಲಾಯಿಸುವ ಪ್ರಯತ್ನ ಮಾಡಲಾಯಿತು. ಈಶಾನ್ಯ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ರಚಿಸಿದ ಮೊದಲ ಸರ್ಕಾರ ಇದಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದಾದ ನಂತರ ಬಂದ ಸರಕಾರಗಳು ಆ ವೇಗವನ್ನು ಮುಂದಕ್ಕೆ ಕೊಂಡೊಯ್ಯಲಿಲ್ಲ. ನಿಮ್ಮ ಸೇವೆ ಮಾಡಲು ನೀವು ನನಗೆ ಅವಕಾಶ ನೀಡಿದಾಗ ಬದಲಾವಣೆಯ ಮತ್ತೊಂದು ಯುಗ ಬಂದಿತು. ಹಿಂದಿನ ಸರ್ಕಾರಗಳು ಈಶಾನ್ಯ ದೂರವಿದೆ ಎಂದು ಭಾವಿಸುತ್ತಿದ್ದರು. ಗಡಿ ಭಾಗದ ಗ್ರಾಮಗಳನ್ನು ಕೊನೆಯ ಗ್ರಾಮಗಳೆಂದು ಪರಿಗಣಿಸಲಾಗಿದೆ, ಆದರೆ ನಮ್ಮ ಸರ್ಕಾರವು ಅವುಗಳನ್ನು ದೇಶದ ಮೊದಲ ಗ್ರಾಮ ಎಂದು ಪರಿಗಣಿಸಿದೆ.
690 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ
2019 ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಅಡಿಪಾಯ ಹಾಕಿದ್ದರು. ಡೋನಿ ಪೋಲೋ ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸೂರ್ಯ (ದೋನಿ) ಮತ್ತು ಚಂದ್ರ (ಪೋಲೋ) ಗಾಗಿ ಪ್ರಾಚೀನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ. ಈ ವಿಮಾನ ನಿಲ್ದಾಣವು 690 ಎಕರೆ ಪ್ರದೇಶದಲ್ಲಿ ಹರಡಿದೆ. ಇದರ ನಿರ್ಮಾಣಕ್ಕೆ 640 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 2300 ಮೀಟರ್ ರನ್ವೇ ಹೊಂದಿರುವ ಈ ವಿಮಾನ ನಿಲ್ದಾಣವು ಎಲ್ಲಾ ಹವಾಮಾನದಲ್ಲೂ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
Arunachal Pradesh : Prime Minister Modi inaugurated a new airport at a cost of 640 crores