ಬೆಂಗಳೂರು: ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಡ್ರಗ್ಸ್ ಲಿಂಕ್ ವಿಚಾರವಾಗಿ ಪರೋಕ್ಷೆ ಹೇಳಿಕೆ ನೀಡಿರುವುದಕ್ಕೆ ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಸತ್ತವರ ಬಗ್ಗೆ ಇಂದ್ರಜಿತ್ ನೀಡಿರುವ ಹೇಳಿಕೆ ಬೇಸರ ತಂದಿದ್ದು, ಮನಸ್ಸಿಗೆ ನೋವಾಯಿತು. ನಾವು ಕೂಡ ಹೆಣ್ಣು ಮಕ್ಕಳನ್ನು ಹೊಂದಿದ್ದೇವೆ. ಆ ಹೆಣ್ಣು ಮಗಳು ಎಷ್ಟೂ ಅಂತ ಅಳಬೇಕು. ಜತೆಗೆ ಪ್ರಶಾಂತ್ ಸಂಬರಗಿ ಗಾಂಧಿನಗರ ಗಾಂಜಾ ನಗರ ಆಗಿದೆ ಎಂಬ ಮಾತುಗಳಿಂದ ನೋವಾಗಿದೆ ಎಂದು ದೊಡ್ಡಣ್ಣ ಹೇಳಿದ್ದಾರೆ.
ನಾವೆಲ್ಲಾ ಸರ್ಕಾರಿ ಕೆಲಸ ಬಿಟ್ಟು ಕಲಾ ಸೇವೆಗೆ ಬಂದವರು. ಕಲೆಯನ್ನು ತಪಸ್ಸು ಎಂದು ನಂಬಿ ಕೆಲಸ ಮಾಡಿದ್ದೇವೆ. ಕೊರೊನಾದಿಂದಾಗಿ ಸ್ಯಾಂಡಲ್ವುಡ್ನಲ್ಲಿ ಕೆಲಸ ಇಲ್ಲದ ಕೈಗಲು ಕೆಲಸಕ್ಕಾಗಿ ಹಾತೊರೆದು ನಿಂತಿವೆ. ಚಿತ್ರಮಂದಿರ ಓಪನ್ ಮಾಡಿ ಎಂದು ಅಂಗಲಾಚುತ್ತಿವೆ. ಇಂತಹ ಸಂದರ್ಭದಲ್ಲಿ ನಟರು, ನಿರ್ಮಾಪಕರು, ನಿರ್ದೇಶಕರು ಡ್ರಗ್ ತೆಗೆದುಕೊಳ್ಳಲು ಸಮಯವೂ ಇಲ್ಲ, ಹಣವೂ ಇಲ್ಲ ಎಂದರು.