ಲಂಡನ್: ವಿಮಾನ ಟೇಕ್ ಆಪ್ ಆಗುತ್ತಿದ್ದತ್ತೆ ಜೋಡಿಯೊಂದು ಸೆಕ್ಸ್ ಮಾಡಿ ಸಿಕ್ಕಿ ಹಾಕಿಕೊಂಡಿದೆ.
ಈ ಜೋಡಿಗೆ ಬ್ರಿಟನ್ನಿನ ಬ್ರಿಸ್ಟಲ್ ಮ್ಯಾಜಿಸ್ಟ್ರೇಟ್ ಕೋರ್ಟ್ (Bristol Magistrates Court) ಶಿಕ್ಷೆ ವಿಧಿಸಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಸಿಜೆಟ್ ವಿಮಾನದಿಂದ (EasyJet flight,) ಈ ಘಟನೆ ನಡೆದಿದೆ.
ಬ್ರಾಡ್ಲಿ ಸ್ಮಿತ್ ಮತ್ತು ಆಂಟೋನಿಯಾ ಸುಲ್ಲಿವಾನ್ ಇಬ್ಬರೂ ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕಾಫ್ ಆಗುತ್ತಿದ್ದಂತೆ ಸೆಕ್ಸ್ ಮಾಡಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆನಂತರ ವಿಮಾನವನ್ನು ಕೆಳಗಿಳಿಸಿ ಅವರಿಬ್ಬರನ್ನು ಹೊರಗೆ ಹಾಕಲಾಗಿತ್ತು.
ಈ ಜೋಡಿ ಮಾರ್ಚ್ 3ರಂದು ಸ್ಪೇನ್ ನ ಟೆನೆರಿಫ್ ನಿಂದ ಬ್ರಿಸ್ಟಲ್ ಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ಟೇಕಾಫ್ ಆಗುತ್ತಿದ್ದಂತೆ ಸೆಕ್ಸ್ ಗೆ ಮುಂದಾಗಿದ್ದಾರೆ. ಆಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಅನುಚಿತ ವರ್ತನೆ ಬಗ್ಗೆ ಸಿಬ್ಬಂದಿ ದೂರು ಸಲ್ಲಿಸಿದ್ದರು.
ಕೂಡಲೇ ಇಬ್ಬರನ್ನು ಬಂಧಿಸಲಾಗಿತ್ತು. ಈ ಜೋಡಿ ಕೋರ್ಟ್ ಮುಂದೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಒಪ್ಪಿಕೊಂಡಿತ್ತು. ಸದ್ಯ ಇಬ್ಬರಿಗೂ ಕೋರ್ಟ್ ಶಿಕ್ಷೆ ನೀಡಿದೆ.