ಬೆಂಗಳೂರು: ಅಭಿಮಾನಿಗಳ ಡಿಬಾಸ್, ನಿರ್ದೇಶಕರ ಡಾರ್ಲಿಂಗ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್‌ಡೌನ್ ಘೋಷಣೆಯಾದಾಗಿನಿಂದ ತಮ್ಮ ಆಪ್ತರ ಮೂಲಕ ಸಮಸ್ಯೆಯಲ್ಲಿ ಸಿಲುಕಿದವರಿಗೆ ನೆರವಾಗುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ದೀಪ ಹಚ್ಚೋಣ ಬನ್ನಿ ಎಂಬ ಕರೆಗೂ ದರ್ಶನ್ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
”ನಮ್ಮ ಪ್ರಧಾನಿಗಳ ಕರೆಯಂತೆ ಕೊರೊನ ವೈರಸ್ ನಿಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5 , ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿAದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ” ಎಂದು ದರ್ಶನ್ ತೂಗುದೀಪ ಟ್ವೀಟ್ ಮಾಡಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ದಚ್ಚು, ಎಲ್ಲಾ ಭಾರತೀಯರು ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ ಎಂದು ತಮ್ಮ ಅಭಿಮಾನಿಗಳಿಗೆ ಕರೆಕೊಟ್ಟಿದ್ದಾರೆ.