Asaduddin owaisi | ಇಂಡೋ – ಪಾಕ್ ಪಂದ್ಯದ ಬಗ್ಗೆ ಓವೈಸಿ ಹೇಳಿದ್ದೇನು ?
ಟಿ 20 ವರ್ಲ್ಡ್ ಕಪ್ ನಲ್ಲಿ ಇಂಡೋ – ಪಾಕ್ ಕದನಕ್ಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ.
ಇದು ಹೀಗಿದ್ದರೇ ಮುಂದಿನ ಏಷ್ಯಾಕಪ್ ಟೂರ್ನಿ ಪಾಕಿಸ್ತಾನ್ ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಭಾಗಿಯಾಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಕ್ಕರ್ ನೀಡಿದ್ದು, ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದೇ ಇದ್ದರೇ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ನಾವು ಬಾಯ್ ಕಟ್ ಮಾಡುತ್ತೇವೆ ಎಂದು ಹೇಳಿದೆ.
ಇದು ಹೀಗಿದ್ದರೇ ಕೆಲವು ಪಾಕಿಸ್ತಾನ್ ಆಟಗಾರರು ನಾಳೆ ನಡೆಯಲಿರುವ ಟಿ 20 ವರ್ಲ್ಡ್ ಕಪ್ ಪಂದ್ಯವನ್ನು ಬಾಯ್ ಕಟ್ ಮಾಡಬೇಕು ಎಂದಿದ್ದಾರೆ.

ಇದು ಹೀಗಿದ್ದರೇ ಎಂಐಎಂ ನಾಯಕ ಹೈದರಾಬಾದ್ ಎಂಪಿ ಅಸಾದುದ್ದೀನ್ ಓವೈಸಿ ಈ ವಿಷಯದ ಬಗ್ಗೆ ಮಾತನಾಡಿದ್ದು, ಏಷ್ಯಾಕಪ್ ಆಡುವುದಕ್ಕೆ ನಾವು ಪಾಕಿಸ್ತಾನಕ್ಕೆ ನಾವು ಹೋಗಬಾರದು ಎಂದಿದ್ದಾಗ ಮೆಲ್ ಬಾರ್ನ್ ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧ ಪಂದ್ಯ ಯಾಕ್ ಆಡಬೇಕು.
ಬಿಟ್ಟು ಬಿಡಿ.. ಪಾಕ್ ವಿರುದ್ಧ ಪಂದ್ಯವಾಡಿಲ್ಲ ಎಂದರೇ ಏನಾಗುತ್ತದೆ..? 2000 ಕೋಟಿ ನಷ್ಟವಾಗುತ್ತಾ ? ಇದು ನಮ್ಮ ದೇಶಕ್ಕಿಂತ ದೊಡ್ಡದಲ್ಲ ಎಂದಿದ್ದಾರೆ.
ಅಸಾದುದ್ದೀನ್ ನೀಡಿರುವ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.








