Ashes 2021-22: ಮೂರು ಮ್ಯಾಚ್ ಗಳಿಗೆ ಆಸೀಸ್ ಟೀಂ ಪ್ರಕಟ Ashes
ಭಾರಿ ಜಿದ್ದಾಜಿದ್ದಿನಿಂದ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಅಧಿಪತ್ಯ ಸಾಧಿಸಿದೆ. ಸತತ ಎರಡು ಮ್ಯಾಚ್ ಗಳನ್ನು ಗೆದ್ದು ಸರಣಿಯಲ್ಲಿ 2.0 ಅಂತರದೊಂದಿಗೆ ಮುನ್ನಡೆ ಸಾಧಿಸಿದೆ.
ಈ ಮಧ್ಯೆ ಇಂಗ್ಲೆಂಡ್ ವಿರುದ್ಧ ಇನ್ನುಳಿದ ಮೂರು ಪಂದ್ಯಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಸದ್ಯ ಇಂಗ್ಲೆಂಡ್ ವಿರುದ್ಧ ಸೆಣಸಾಡುತ್ತಿರುವ ತಂಡವೇ ಮುಂದಿನ ಮೂರು ಪಂದ್ಯಗಳಲ್ಲಿ ಗುದ್ದಾಡಲಿದೆ.
ಅಲ್ಲದೇ ಎರಡನೇ ಮ್ಯಾಚ್ ಗೆ ಅಲಭ್ಯರಾಗಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್, ಫಾಸ್ಟ್ ಬೌಲರ್ ಜೋಷ್ ಹ್ಯಾಂಜಲ್ ವುಡ್ ಮುಂದಿನ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ ಎಂದು ತಿಳಿಸಿದೆ.
ಹೀಗಾಗಿ ಆಶಸ್ ಸರಣಿಯ ಭಾಗವಾಗಿ ಮೆಲ್ಬಾರ್ನ್, ಸಿಡ್ನಿ, ಹಾಬರ್ಟ್ ಟೆಸ್ಟ್ ಪಂದ್ಯಗಳಲ್ಲಿ ಈ ಮೊದಲು ಆಡಿದ್ದ ಆಟಗಾರರೇ ಮುಂದುವೆಯಲಿದ್ದಾರೆ.
Australia have locked in their squad for the three remaining #Ashes Test matches 👇
— cricket.com.au (@cricketcomau) December 20, 2021
ಇನ್ನು ಕೊರೊನಾ ಪಾಸಿಟಿವ್ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಪ್ಯಾಟ್ ಕಮ್ಮಿನ್ಸ್ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರನಡೆದಿದ್ದರು.
ಅವರ ಸ್ಥಾನಕ್ಕೆ ಸ್ವಿವ್ ಸ್ಮಿತ್ ನಾಯಕನ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಸದ್ಯ ಐಸೋಲೆಷನ್ ನಲ್ಲಿರುವ ಪ್ಯಾಟ್ ಕಮ್ಮಿನ್ಸ್ ಮತ್ತೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. ವರದಿ ನೆಗಟಿವ್ ಬಂದ ನಂತರವೇ ಅವರು ತಂಡಕ್ಕೆ ವಾಪಸ್ ಆಗಲಿದ್ದಾರೆ.
ಇತ್ತ ಅಡಿಲೇಡ್ ನಲ್ಲಿ ನಡೆದ ಆಶಸ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಆಸೀಸ್ ಈ ಪಂದ್ಯದಲ್ಲಿ 275 ರನ್ ಗಳ ಅಂತರದ ಗೆಲುವನ್ನ ಸಾಧಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 473 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 236 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಬೃಹತ್ ಮೊತ್ತದ ಲೀಡ್ ನೊಂದಿಗೆ ಎರಡನೇ ಇನ್ನಿಂಗ್ ಆರಂಭಿಸಿದ ಕಾಂಗರೂಗಳು, 290 ರನ್ ಗಳಿಗೆ ಮತ್ತೆ ಡಿಕ್ಲೆರ್ ಮಾಡಿಕೊಂಡಿದ್ದು, ಪಂದ್ಯ ಗೆಲ್ಲಲು 400ಕ್ಕೂ ಅಧಿಕ ಮೊತ್ತ ಗುರಿಯನ್ನು ಪಡೆದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 192 ರನ್ ಗಳಿಗೆ ಆಲೌಟ್ ಆಯಿತು.
ಆ ಮೂಲಕ ಆಸ್ಟ್ರೇಲಿಯಾ 2.0 ಅಂತರದೊಂದಿಗೆ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.








