ಅರೆಬೆತ್ತಲೆ ಬೆನ್ನು ತೋರಿಸಿ ‘ಮದಗಜ’ದ ಬಗ್ಗೆ ಹೀಗೆ ಹೇಳಿದ್ದು ಯಾಕೆ ಆಶಿಕಾ..!
ಬೆಂಗಳೂರು : ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ಮದಗಜ ಸಿನಿಮಾ ಸದ್ಯ ರಿಲೀಸ್ ಆಗಿದ್ದು ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ…
ಈ ಸಿನಿಮಾದಲ್ಲಿ ಶ್ರೀಮುರುಳಿ ಟೆರರ್ ,ಡೇರಿಂಗ್ ಆಗಿ ಕಾಣಿಸಿಕೊಂಡಿದ್ರೆ ಆಶಿಕಾ ರಂಗನಾಥ್ ಸಖತ್ ಕ್ಲಾಸಿಯಾಗಿ ಕಾಣಿಸಿಕೊಂಡಿದ್ಧಾರೆ.. ಆದ್ರೆ ಈ ಸಿನಿಮಾಗಾಗಿ ಆಶಿಕಾ ರಂಗನಾಥ್ ಪಟ್ಟ ಕಷ್ಟ , ಸಹಿಸಿಕೊಂಡ ಕಷ್ಟವನ್ನೆಲ್ಲಾ ಸೋಷಿಯಲ್ಮೀಡಿಯಾದಲ್ಲಿ ಅರೆಬೆತ್ತಲೆ ಬೆನ್ನಿನ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ..
ಇನ್ ಸ್ಟಾಗ್ರಾಂನಲ್ಲಿ ಆಶಿಕಾ ಶೇರ್ ಮಾಡಿರುವ ತಮ್ಮ ಅರೆಬೆತ್ತಲೆ ಬೆನ್ನಿನ ಫೋಟೋದಲ್ಲಿ , ಅವರ ಬೆನ್ನಿನ ಮೇಲೆ ಕೆಂಪಗಾಗಿರುವ ಚರ್ಮ ಸುಟ್ಟಿರುವುದು ಗೊತ್ತಾಗುತ್ತೆ.. ಮದಗಜ ಸಿನಿಮಾದ ಪಾತ್ರಕ್ಕೆ ಪಟ್ಟ ಶ್ರಮ ಎಂದು ನಟಿ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಒಂದು ವಿಡಿಯೋ ಹಂಚಿಕೊಂಡಿದ್ದಾರೆ.. ಈ ವಿಡಿಯೋದಲ್ಲಿ ಆಶಿಕಾ ಶೂಟಿಂಗ್ ವೇಳೆ ಟ್ರ್ಯಾಕ್ಟರ್ ಓಡಿಸಿರುವುದರ ಕ್ಲಿಪ್ಸ್ ಇದೆ..
ಅಲ್ಲದೇ ಶ್ರಮದ ಬಗ್ಗೆ ಮಾತನಾಡಿರುವ ಆಶಿಕಾ , ಕಂಡಷ್ಟು ಸುಲಭವಲ್ಲ ‘ಮದಗಜ’ದ ನಾಯಕಿ ಪಲ್ಲವಿ ಪಾತ್ರದಲ್ಲಿ ನಟಿಸುವುದು. ಆ ಪಾತ್ರಕ್ಕಾಗಿ ಸಾಕಷ್ಟು ಶ್ರಮ, ಕಷ್ಟ ಪಟ್ಟು ತಾಳ್ಮೆಗಳನ್ನು ಸುರಿದು ನಟಿಸಿದ್ದೇನೆ. ಇಂದು ರಾಜ್ಯದೆಲ್ಲೆಡೆಯಿಂದ ಪ್ರಶಂಸೆಗಳು ಕೇಳಿ ಬರುತ್ತಿವೆ ಇದು ನನ್ನ ಶ್ರಮಕ್ಕೆ ಫಲ, ಬಹಳ ಸಂತೋಶವಾಗುತ್ತಿದೆ. ನನ್ನನ್ನು ನನ್ನಂತೆಯೇ ಪ್ರೀತಿಸುವ ಎಲ್ಲರಿಗೂ ಧನ್ಯವಾದಗಳು, ಎಂದಿದ್ದಾರೆ..