Ashish Nehra | ವಿಶ್ವಕಪ್ ತಂಡದಲ್ಲಿ ಶಮಿಗೆ ಚಾನ್ಸ್ ಸಿಗೋದಿಲ್ಲ
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತ ಈಗಾಗಲೇ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಗೆ ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡಿದೆ. ಯುವ ವೇಗಿಗಳಾದ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಹಿರಿಯ ವೇಗಿ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಅದೇ ರೀತಿ ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ರಂತಹ ಯುವ ವೇಗಿಗಳಿಂದ ಶಮಿ ತೀವ್ರ ಪೈಪೋಟಿ ಎದುರಿಸಲಿದ್ದಾರೆ. ಈ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಶಮಿ ಸ್ಥಾನ ಪಡೆಯದಿದ್ದರೂ, ಮುಂದಿನ ವರ್ಷದ ಏಕದಿನ ವಿಶ್ವಕಪ್ಗೆ ಅವರು ಖಂಡಿತವಾಗಿಯೂ ತಂಡದಲ್ಲಿರಬೇಕು ಎಂದು ನೆಹ್ರಾ ಹೇಳಿದ್ದಾರೆ.

“ಟಿ 20 ವಿಶ್ವಕಪ್ ಗೆ ಭಾರತದ ಯೋಜನೆಯಲ್ಲಿ ಶಮಿ ಇರೋದಿಲ್ಲ ಎಂದು ಅನಿಸುತ್ತಿದೆ, ಅವರು ಆಯ್ಕೆಯಾದರೂ ಮಿಂಚುತ್ತಾರೆ, ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.
ಈ ಮೆಗಾ ಟೂರ್ನಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿದರೂ ಮುಂದಿನ ವರ್ಷ ನಡೆಯಲಿರುವ 50 ಓವರ್ ಗಳ ವಿಶ್ವಕಪ್ ಗೆ ಆಯ್ಕೆಯಾಗಬೇಕು.
ಐಪಿಎಲ್ ಬಳಿಕ ಶಮಿ ವಿಶ್ರಾಂತಿಯಲ್ಲಿದ್ದಾರೆ. ಆದರೆ ಈ ವರ್ಷ ಯಾವುದೇ ದೊಡ್ಡ ಏಕದಿನ ಸರಣಿಗಳು ಇಲ್ಲ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ನಂತರ ಶಮಿ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯಬಹುದು. ಇಂಗ್ಲೆಂಡ್ನಂತಹ ಅಗ್ರ ತಂಡವನ್ನು ಸೋಲಿಸಲು, ನೀವು ಖಂಡಿತವಾಗಿಯೂ ಶಮಿಯಂತಹ ಬೌಲರ್ ಅನ್ನು ತಂಡದಲ್ಲಿ ಹೊಂದಿರಬೇಕು, ”ಎಂದು ನೆಹ್ರಾ ಹೇಳಿದರು.








