Ashish Nehra | ಟಿ 20 ವಿಶ್ವಕಪ್ ಗೆ ಭಾರತ ತಂಡ.. ದೀಪಕ್ ಚಹಾರ್ ಗೆ ನೋ ಚಾನ್ಸ್
ಟಿ 20 ವಿಶ್ವಕಪ್ 2022 ಆಸ್ಟ್ರೇಲಿಯಾದಲ್ಲಿ ನಡೆಯೋದು ಗೊತ್ತಿರುವ ವಿಚಾರವೇ. ಈ ವಿಶ್ವಕಪ್ ಗಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಗಳಂತಹ ಅಗ್ರಶೇಣಿ ತಂಡಗಳು ಇಲ್ಲಿಯವರೆಗೂ ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಲಾಗಿದೆ. ಈ ಮೆಗಾ ಈವೆಂಟ್ ಗೋಸ್ಕರ ಭಾರತ ತಂಡವನ್ನು ಬಿಸಿಸಿಐ ಸೆಪ್ಟೆಂಬರ್ 16 ರಂದು ಪ್ರಕಟಿಸಲಿದೆ. ಆದರೆ ಈ ಮೆಗಾ ಟೂರ್ನಿಗೂ ಮುನ್ನಾ ವೇಗಿ ಜಸ್ ಪ್ರೀತ್ ಬುಮ್ರಾ, ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಕ್ಕೆ ತುತ್ತಾಗಿರುವುದು ಗೊತ್ತಿರುವ ವಿಚಾರವೇ.
ಇದು ಹೀಗಿದ್ದರೇ ಟಿ 20 ವಿಶ್ವಕಪ್ ನಲ್ಲಿ ಭಾಗಿಯಾಗಲಿರುವ ಭಾರತ ತಂಡವನ್ನು ಮಾಜಿ, ಕ್ರಿಕೆಟ್ ಪಂಡಿತರು ಅಂದಾಜಿಸುತ್ತಿದ್ದಾರೆ. ಅದರಂತೆ ಇದೀಗ ಭಾರತ ತಂಡದ ಮಾಜಿ ವೇಗಿ ಆಶಿಷ್ ನೆಹ್ರಾ ತಮ್ಮ ತಂಡವನ್ನು ಪ್ರಕಟಿಸಿದ್ದಾರೆ.

ಬ್ಯಾಟರ್ ಗಳಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆ.ಎಲ್, ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ್ದಾರೆ. ಆಲ್ ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದೀಪಕ್ ಹೂಡಾ ಇದ್ದು, ಬೌಲರ್ ಗಳಲ್ಲಿ ಯುಜವೇಂದ್ರ ಚಹಾಲ್, ಅಶ್ವಿನ್, ಜಸ್ ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಇದ್ದಾರೆ. ಇನ್ನು ನೆಹ್ರಾ ತಂಡದಲ್ಲಿ ಸಿನಿಯರ್ ಪ್ಲೇಯರ್ಸ್ ಮೊಹ್ಮದ್ ಶಮಿ, ದೀಪಕ್ ಚಹಾರ್ ಗೆ ಅವಕಾಶ ನೀಡಿಲ್ಲ
ನೆಹ್ರಾತ ಭಾರತ ತಂಡ : ರೋಹಿತ್ ಶರ್ಮಾ, ಕೆ.ಎಲ್.ರಾಹುಲ್,ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜವೇಂದ್ರ ಚಹಾಲ್, ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್, ಜಸ್ ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್, ಅರ್ಷ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ದೀಪಕ್ ಹೂಡಾ








