ಶ್ರೀ ವರ ಮಹಾಲಕ್ಷ್ಮೀ ವ್ರತ 16-08-2024 ಶುಕ್ರವಾರ
“ಶುಕ್ಲೇ ಶ್ರಾವಣೇ ಮಾಸಿ ಪೂರ್ಣಿಮೋಪಾಂತ್ಯ ಭಾರ್ಗವೇ
” ವರಮಹಾಲಕ್ಷ್ಮೀ ವ್ರತ ಕಾರ್ಯಂ :-
ಎಂಬ ಶ್ಲೋಕದ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಶುಕ್ಲ ಹುಣ್ಣಿಮೆಯ ಹತ್ತಿರದ ಶುಕ್ರವಾರ (ಹುಣ್ಣಿಮೆಯ ಶುಕ್ರವಾರದಲ್ಲಿ ) 16-08-2024. ಆಚರಿಸಲ್ಪಡುವ ವ್ರತಪೂಜೆಯೇ
“ಶ್ರೀ ವರಮಹಾಲಕ್ಷ್ಮೀ ವ್ರತ”..
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹಿಂದೆ ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಯುವಾಗ ಶ್ರೀಲಕ್ಷ್ಮಿಯು ಸ್ವಯಂಭೂವಾಗಿ ಪದ್ಮದಲ್ಲಿ ಆವಿರ್ಭವಿಸುತ್ತಾಳೆ..
ಮಹಾಪದ್ಮ ಸಂಸ್ಥಳಾದ ದೇವಿಯು ಶ್ರೀಮಹಾಲಕ್ಷ್ಮೀ ಸ್ವರೂಪಿಣಿಯಾಗಿದ್ದಾಳೆ.
ಶ್ರೀ ಲಕ್ಷ್ಮಿಯು ಅಷ್ಟಲಕ್ಷ್ಮಿಯಾಗಿ ಎಲ್ಲರನ್ನೂ ಸಲಹುತ್ತಾಳೆ.
ಆದಿಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವೀರಲಕ್ಷ್ಮೀ, ವಿದ್ಯಾಲಕ್ಷ್ಮೀ, ಜಯಲಕ್ಷ್ಮೀ.
ಈ ರೀತಿ ಅಷ್ಟಲಕ್ಷ್ಮಿಯರಾಗಿ ಭಕ್ತರ ಕೋರಿಕೆಗಳನ್ನು ಅತೀ ಶೀಘ್ರದಲ್ಲೇ ನೆರವೇರಿಸುವ ಅಮೃತಾನಂದ ಮಯಿಯಾಗಿದ್ದಾಳೆ.
ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಮಹತ್ವದ ಮತ್ತು ಶಕ್ತಿಯುತವಾದ ಆಚರಣೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಶಿವನು ಪಾರ್ವತಿ ದೇವಿಗೆ ಈ ವ್ರತ ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾನೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಜನರು ಎಲ್ಲಾ ರೀತಿಯ ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ವಿಷಯವನ್ನು ಅನುಭವಿಸುತ್ತಾರೆ. ಅಲ್ಲದೆ, ಭಕ್ತರ ಜೀವನ ಮತ್ತು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ಮೇಲುಗೈ ಸಾಧಿಸುತ್ತದೆ.
” ಶ್ರೀ ವರಲಕ್ಷ್ಮೀ ವ್ರತ ಕಥಾ ”
ಒಂದುಸಾರಿ ಸೂತ ಪುರಾಣಿಕರು ಸನಕಾದಿ ಋಷಿಗಳು ಆಶ್ರಮಕ್ಕೆ ಬಂದಾಗ ಸನಕಾದಿ ಋಷಿಗಳು ಸೂತ ಪುರಾಣಿಕರನ್ನು ಅರ್ಘ್ಯ ಪಾದ್ಯಾದಿಗಳಿಂದ ಗೌರವಿಸಿದರು.
ಲೋಕಾನುಗ್ರಹಾರ್ಥವಾಗಿ ಯಾವುದಾದರೂ ವ್ರತವನ್ನು ಹೇಳಿ ಎಂದು ಕೇಳಿದರು. ಸೂತ ಪುರಾಣಿಕರೇ! ಯಾವ ವ್ರತವನ್ನು ಮಾಡಿದರೆ ಮಾನವರಿಗೆ ಸಕಲ ಸೌಭಾಗ್ಯವೂ, ಐಶ್ವರ್ಯವೂ ಉಂಟು ಮಾಡುವದೋ ಅಂಥಾ ವ್ರತದ ಪೂಜಾ ವಿಧಾನವನ್ನು ವಿವರಿಸಬೇಕೆಂದು ಕೇಳಲಾಗಿ ಆಗ ಸೂತ ಪುರಾಣಿಕರು ಹೀಗೆಂದರು.
ಸನಕಾದಿ ಋಷಿಗಳಿರೆ ಕೇಳಿರಿ. ಶಿವನ ವಾಸ ಸ್ಥಾನವಾದ ಕೈಲಾಸವು ಅತ್ಯಂತ ರಮಣೀಯವಾದ ಪ್ರದೇಶ. ಶ್ರೀ ಪಾರ್ವತೀದೇವಿಯರೊಡನೆ ಶ್ರೀ ಮಹಾರುದ್ರದೇವರು ಆನಂದವಾಗಿ ಅಲ್ಲಿ ವಾಸವಾಗಿರುವರು. ಪ್ರಥಮ ಗಣಗಳೂ ಇರುವುವು. ಕಲ್ಪವೃಕ್ಷ, ಕಾಮಧೇನು ಮುಂತಾದ ಅಮೂಲ್ಯವಾದ ವಸ್ತುಗಳೂ ಅಲ್ಲಿವೆ.
ಅನೇಕ ಬೆಲೆ ಬಾಳುವ ವೃಕ್ಷಗಳಾದ ಅಶ್ವತ್ಥ, ಆಲ, ದೇವದಾರು, ಶ್ರೀಗಂಧ ಮುಂತಾದ ಮರಗಳು ಗಗನಚುಂಬಿಯಾಗಿ ಬೆಳೆದು ಕೈಲಾಸದ ಶೋಭೆಯನ್ನು ಹೆಚ್ಚಿಸುತ್ತಿದೆ. ಬ್ರಹ್ಮರ್ಷಿಗಳೂ, ಮುನಿಗಳೂ ಶ್ರೀ ರುದ್ರದೇವರ ಸೇವೆಯಲ್ಲಿ ತೊಡಗಿರುವರು. ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷಾದಿಗಳು ಗಣಾ ಮಾಡುತ್ತಾ, ನರ್ತಿಸುತ್ತಾ ಶ್ರೀ ರುದ್ರದೇವರನ್ನು ಸ್ತುತಿಸುತ್ತಿರುವರು.
ಅವರೆಲ್ಲರ ಸೇವೆಯನ್ನು ಸ್ವೀಕರಿಸುತ್ತಾ ಶ್ರೀ ರುದ್ರದೇವರು ಆನಂದದಿಂದಿರಲು ಒಂದು ದಿನ ಶ್ರೀ ಪಾರ್ವತಿಯು ಶ್ರೀ ರುದ್ರದೇವರನ್ನು ಕುರಿತು….
” ಸ್ವಾಮೀ! ಲೋಕಾನುಗ್ರಹಾರ್ಥ ಒಂದು ವ್ರತವನ್ನು ಹೇಳು ” ಎಂದು ಕೇಳಲು ಶ್ರೀ ರುದ್ರದೇವರು…
ಪಾರ್ವತೀ! ” ವರಲಕ್ಷ್ಮೀ ವ್ರತ್ರ ” ಎಂಬ ಒಂದು ವ್ರತವಿದೆ. ಆ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಅಂದರೆ 2ನೆಯ ಶುಕ್ರವಾರ ಈ ವ್ರತವನ್ನು ಆಚರಿಸಬೇಕು. ಆಗ ಪಾರ್ವತಿಯು ಎಲೈ ಸ್ವಾಮೀ!
ಈ ವ್ರತವನ್ನು ಮಾಡುವ ವಿಧಾನವೇನು?ಹಿಂದೆ ಯಾರು ಈ ವ್ರತವನ್ನು ಮಾಡಿದ್ದರು?
ಎಂದು ಕೇಳಲು ಶ್ರೀ ರುದ್ರದೇವರು ” ಚಾರುಮತೀ ” ಯ ಕಥೆಯನ್ನು ಹೇಳಿದರು.
ವಿದರ್ಭ ದೇಶದ ಕುಂಡಿನ ನಗರವು ಸಕಲೈಶ್ವರ್ಯ ಸಮೃದ್ಧವಾಗಿ ಕಂಗೊಳಿಸುತ್ತಿತ್ತು. ಇದೇ ನಗರದಲ್ಲಿ ” ಚಾರುಮತೀ ” ಎಂಬ ಒಬ್ಬ ಬ್ರಾಹ್ಮಣ ಪತಿವ್ರತಾ ಸ್ತ್ರೀ ಇದ್ದಳು. ಅವಳು ಪತಿ ಶುಶ್ರೂಷಾ ಪರಾಯಣಳೂ, ಮೃಧುಭಾಷಿಯೂ ಆಗಿದ್ದಳು. ಈ ಬ್ರಾಹ್ಮಣ ಸ್ತ್ರೀಯು ತುಂಬಾ ಬಡತನದಿಂದ ಕಷ್ಟ ಪಡುತ್ತಿದ್ದರೂ, ಪತಿಗೆ ಏನೂ ತೊಂದರೆಯಾಗದಂತೆ ಅವನ ಸೇವೆ ಮಾಡುತ್ತಿದ್ದಳು.
ಚಾರುಮತಿ ಯ ಪಾತಿವ್ರತ್ಯದ ಬಗ್ಗೆ ಸಂತುಷ್ಟಳಾದ ಶ್ರೀ ಮಹಾಲಕ್ಷ್ಮೀದೇವಿಯರು ಚಾರುಮತಿಯ ಸ್ವಪ್ನದಲ್ಲಿ ಕಾಣಿಸಿಕೊಂಡು…
ಮಹಾ ಪತಿವ್ರತೆಯಾದ ಚಾರುಮತೀ! ನೀನು ಪುಣ್ಯವಂತೆ. ನಿನಗೆ ವರವನ್ನು ಕೊಡಲು ಬಂದ ನಾನು ಶ್ರೀ ವರಮಹಾಲಕ್ಷ್ಮೀ!
ಶ್ರಾವಣ ಮಾಸದ ೨ನೆಯ ಶುಕ್ರವಾರ ನನ್ನನ್ನು ಯಾರು ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಾರೋ ಅವರಿಗೆ ಸಕಲ ಸಂಪತ್ತುಗಳನ್ನೂ ಕೊಡುತ್ತೇನೆ. ಯಾರು ಮಹಾ ಪುಣ್ಯಶಾಲಿಗಳೋ ಅವರಿಗೆ ಮಾತ್ರ ನನ್ನ ವ್ರತವನ್ನು ಮಾಡಬೇಕೆಂಬ ಇಚ್ಛೆ ಉಂಟಾಗುತ್ತದೆ. ಯಾವ ಪುರುಷನು ನನ್ನ ಪೂಜೆ ಮಾಡುವನೋ ಅವನೇ ಧನ್ಯನು! ಅವನೇ ಪರಾಕ್ರಮಿಯೂ, ಅವನೇ ಕೀರ್ತಿಶಾಲಿಯೂ ಆಗುತ್ತಾನೆ.
ನನ್ನ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಭಕ್ತರಿಗೆ ಧನ – ಧಾನ್ಯ, ಸಂಪತ್ತು, ಸಂತಾನಗಳನ್ನು ಕರುಣಿಸುತ್ತೇನೆ. ಕೊನೆಗೆ ಮೋಕ್ಷ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ!
ಎಂದು ಹೇಳಿ ಅಂತರ್ಧಾನಳಾದಳು. ಚಾರುಮತೀ ನಿದ್ರೆಯಿಂದ ಎಚ್ಚೆತ್ತು ಪತಿ ಹಾಗೂ ಬಂಧುಗಳಿಗೆ ಸ್ವಪ್ನ ವೃತ್ತಾಂತವನ್ನು ತಿಳಿಸಿದಾಗ ಎಲ್ಲರೂ ಚಾರುಮತಿಯ ಅದೃಷ್ಟವನ್ನು ಹೊಗಳಿದರು. ಅನಂತರ ಚಾರುಮತಿಯು ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಕಲ್ಪೋಕ್ತವಾಗಿ
ಬಂಧು ಬಾಂಧವರೊಡನೆ ಸಂಭ್ರಮದಿಂದಲೂ, ಶ್ರದ್ಧಾ ಭಕ್ತಿಗಳಿಂದಲೂ ಆಚರಿಸಿದಳು.
ಇದರಿಂದ ಶ್ರೀ ವರಮಹಾಲಕ್ಷ್ಮೀದೇವಿಯ ಪರಮಾನುಗ್ರಹಕ್ಕೆ ಪಾತ್ರಳಾಗಿ ಸಕಲೈಶ್ವರ್ಯವನ್ನು ಪಡೆದು ಪುತ್ರ, ಪೌತ್ರ ಪರಿವೃತಳಾಗಿ ಅನ್ನದಾನ ಮಾಡುತ್ತಾ ಬಂಧು ಜನರನ್ನು ಪೋಷಿಸುತ್ತಾ ಇಹದಲ್ಲಿ ಸಕಲ ಸುಖಗಳನ್ನೂ ಪಡೆದು ಅಂತ್ಯದಲ್ಲಿ ವಿಷ್ಣುಲೋಕವನ್ನು ಪಡೆದಳು.
ಆದ್ದರಿಂದ ಗಿರಿಜೇ! ಈ ವ್ರತವನ್ನು ಯಾರು ಮಾಡುತ್ತಾರೋ ಅವರಿಗೆ ಸಕಲ ಸಂಪತ್ತುಗಳೂ ಪ್ರಾಪ್ತವಾಗುವುವು ಎಂದು ಹೇಳಲು ಶ್ರೀ ಪಾರ್ವತೀದೇವಿಯು….
ವ್ರತ ಮಾಡುವ ವಿಧಾನವನ್ನು ತಿಳಿಸಬೇಕೆಂದು ಪ್ರಾರ್ಥಿಸಲು ಶ್ರೀ ರುದ್ರದೇವರು…
ಈ ವ್ರತವನ್ನು ಮಾಡುವವರು ಪ್ರಾತಃ ಕಾಲದ ನಿತ್ಯಕರ್ಮ ಮುಗಿಸಿ, ಅಭ್ಯಂಜನ ಸ್ನಾನ ಮಾಡಿ ಶುಚೀರ್ಭೂತರಾಗಿ ಮಡಿ ಬಟ್ಟೆಗಳನ್ನುಟ್ಟು ಪೂಜೆಗೆ ಸಿದ್ಧ ಮಾಡಿಕೊಳ್ಳಬೇಕು.
ಸಾರಿಸಿ ರಂಗವಲ್ಲಿ ಹಾಕಿ, ಭೂಮಿಯ ಮೇಲೆ ಸುಂದರವಾದ ಮಂಟಪವನ್ನು ನಿರ್ಮಿಸಬೇಕು. ಮಂಟಪದ ಮಧ್ಯ ಭಾಗದಲ್ಲಿ ಪಂಚ ವರ್ಣಗಳಿಂದ ಅಷ್ಟ ದಳ ಪದ್ಮವನ್ನು ಬರೆದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ಕಳಶವನ್ನಿಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಕಲ್ಪೋಕ್ತ ಪ್ರಕಾರ ಪೂಜಿಸಬೇಕು.
5 ವಿಧವಾದ ಅನ್ನ, ಭಕ್ಷ್ಯಗಳನ್ನೂ, ವಿವಿಧವಾದ ಫಲಗಳನ್ನೂ ನೈವೇದ್ಯ ಮಾಡಿ ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನ ಕೊಡಬೇಕು.
ಸುವಾಸಿನಿಯರಿಗೆ ಅರಿಶಿನ, ಕುಂಕುಮ, ಬಳೆ, ಗಂಧ, ಪುಷ್ಪ, ದಕ್ಷಿಣೆ, ತಾಂಬೂಲವನ್ನು ಕೊಟ್ಟು ಬ್ರಾಹ್ಮಣ ಸುವಾಸಿನೀಯರ ಪೂಜಿ ಮಾಡಬೇಕು ಶ್ರದ್ಧೆಯಿಂದ ಕಥೆ ಕೇಳಬೇಕು ಎಂದು ಶ್ರೀ ರುದ್ರದೇವರು ಪಾರ್ವತಿಗೆ ಹೇಳಿದ ವಿಚಾರವನ್ನು ಶ್ರೀ ಸೂತ ಪುರಾಣಿಕರು ಸನಕಾದಿ ಋಷಿಗಳಿಗೆ ಹೇಳಿದರು!
ಯಾರು ವ್ರತ ಕಥೆಯನ್ನು ಶ್ರದ್ಧೆಯಿಂದ ಕೇಳುವರೋ, ಹೇಳುವರೋ ಅಂಥವರು ಸಕಲ ದಾರಿದ್ರ್ಯದಿಂದ ವಿಮುಕ್ತರಾಗಿ ಸಕಲೈಶ್ವರ್ಯವನ್ನು ಅನುಭವಿಸಿ ಅಂತ್ಯದಲ್ಲಿ ವಿಷ್ಣು ಸಾಯುಜ್ಯವನ್ನು ಹೊಂದುವರು ಎಂದು ಭವಿಷ್ಯೋತ್ತರ ಪುರಾಣೋಕ್ತ ಶ್ರೀ ವರಮಹಾಲಕ್ಷ್ಮೀ ವ್ರತ ಕಥೆಯು ಸಂಪೂರ್ಣವಾಯಿತು!!!
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶ್ರೀ ವರಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)