ಸಿಬಿಐನ ಮಾಜಿ ನಿರ್ದೇಶಕ ಮತ್ತು ನಾಗಾಲ್ಯಾಂಡ್‌ನ ಮಾಜಿ ಗವರ್ನರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Ashwani Kumar
ಶಿಮ್ಲಾ, ಅಕ್ಟೋಬರ್07: ಸಿಬಿಐನ ಮಾಜಿ ನಿರ್ದೇಶಕ ಮತ್ತು ನಾಗಾಲ್ಯಾಂಡ್‌ನ ಮಾಜಿ ಗವರ್ನರ್ ಅಶ್ವನಿ ಕುಮಾರ್ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Ashwani Kumar
ಬುಧವಾರ ಶಿಮ್ಲಾದ ಬ್ರಾಕ್‌ಹಾರ್ಸ್ಟ್‌ನಲ್ಲಿರುವ ಅವರ ನಿವಾಸದಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿಯವರೆಗಿನ ವರದಿಗಳ ಪ್ರಕಾರ, ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಮಣಿಪುರ ಮತ್ತು ನಾಗಾಲ್ಯಾಂಡ್‌ನ ಮಾಜಿ ಗವರ್ನರ್ ಮತ್ತು ಮಾಜಿ ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಅವರು ಶಿಮ್ಲಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಚಾವ್ಲಾ ಅವರು ಹೇಳಿದ್ದಾರೆ.
ಅಶ್ವನಿ ಕುಮಾರ್ ಆಗಸ್ಟ್ 2006 ರಿಂದ ಜುಲೈ 2008 ರವರೆಗೆ ಹಿಮಾಚಲ ಪ್ರದೇಶದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದರ ನಂತರ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಅಶ್ವಿನಿ ಕುಮಾರ್ ಅವರು ಆಗಸ್ಟ್ 2, 2008 ರಿಂದ ನವೆಂಬರ್ 30, 2010 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv










