ದಾಖಲೆ ಮೇಲೆ ದಾಖಲೆ ಬರೆದು ಹರ್ಭಜನ್ ಬಳಿ ಕ್ಷಮೆ ಕೋರಿದ ಅಶ್ವಿನ್..!
ಸ್ಪಿನ್ ಮ್ಯಾಜಿಷಿಯನ್ ಆರ್. ಅಶ್ವಿನ್ ತನ್ನ ತವರಿನ ಅಂಗಣದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಇಂಗ್ಲೀಷ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅದೇ ರೀತಿ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಅಶ್ವಿನ್ ಅವರು ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಮೋಡಿ ಮಾಡಿದ್ದರು.
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಅಶ್ವಿನ್ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ 200 ಎಡಗೈ ಬ್ಯಾಟ್ಸ್ ಮೆನ್ ಗಳ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಮತ್ತೊಂದೆಡೆ ಅಶ್ವಿನ್ ಇನ್ನೊಂದು ಸಾಧನೆ ಮಾಡಿದ್ದಾರೆ. ತವರಿನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಲಿನಲ್ಲಿ ಎರಡನೇಯವರಾಗಿದ್ದಾರೆ. ಅನಿಲ್ ಕುಂಬ್ಳೆ ತವರಿನಲ್ಲಿ 350 ವಿಕೆಟ್ ಪಡೆದ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅಶ್ವಿನ್ ಅವರು ಹರ್ಭಜನ್ ಸಿಂಗ್ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್ 255 ವಿಕೆಟ್ ಪಡೆದ ಎರಡನೇ ಸ್ಥಾನದಲ್ಲಿದ್ರು. ಇದೀಗ ಅಶ್ವಿನ್ 266 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ರೆ, ಹರ್ಭಜನ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
ಆರ್. ಅಶ್ವಿನ್ ಅವರು 76 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 391 ವಿಕೆಟ್ ಉರುಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್, ಮೊದಲು ಹರ್ಭಜನ್ ಸಿಂಗ್ ಬಳಿ ಕ್ಷಮೆ ಕೇಳಿಕೊಂಡಿದ್ದಾರೆ.
2001ರಲ್ಲಿ ಹರ್ಭಜನ್ ಸಿಂಗ್ ಆಡುತ್ತಿರುವುದನ್ನು ನೋಡುತ್ತಿದ್ದೆ. ಆದ್ರೆ ಮುಂದೊಂದು ದಿನ ನಾನು ಟೀಮ್ ಇಂಡಿಯಾ ಪರ ಆಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ನಾನು ಆಗ ಬ್ಯಾಟ್ಸ್ ಮೆನ್ ಆಗಿದ್ದೆ. ನಂತರ ಎಲ್ಲವೂ ಬದಲಾಗಿ ಹೋಯ್ತು. ಉತ್ತಮವಾಗಿ ಆಡುತ್ತಾ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡು. ಈ ಬಗ್ಗೆ ನನಗೆ ಹೆಮ್ಮೆ ಇದೆ. ಇದೀಗ ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದೇನೆ. ಕ್ಷಮಿಸಿ ಭಜ್ಜಿ ಎಂದು ಹೇಳಿದ್ದಾರೆ.
ಇನ್ನು ಅಶ್ವಿನ್ ಅವರ ಮುಂದಿನ ಟಾರ್ಗೆಟ್ 400 ವಿಕೆಟ್ ಪಡೆಯುವುದು. ಆದಾದ ನಂತರ ಹರ್ಭಜನ್ ಸಿಂಗ್ ಮತ್ತು ಕಪಿಲ್ ದೇವ್, ದಾಖಲೆಯನ್ನು ಅಳಿಸಿ ಹಾಕೊದು. ಸದ್ಯದ ಅಶ್ವಿನ್ ಅವರ ಫಾರ್ಮ್ ಅನ್ನು ನೋಡಿದಾಗ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಲಿನಲ್ಲಿ ಎರಡನೇಯವರಾಗಿ ನಿಲ್ಲಬಹುದು. ಅನಿಲ್ ಕುಂಬ್ಳೆ ದಾಖಲೆ ಅಳಿಸಿ ಹಾಕೋದು ಕಷ್ಟ.. ಆದ್ರೆ ಹರ್ಭಜನ್, ಕಪಿಲ್ ದೇವ್ ದಾಖಲೆಯನ್ನು ಅಳಿಸಿ ಹಾಕೋದು ಪಕ್ಕಾ.








