Ashwin : ಟೀಂ ಇಂಡಿಯಾಗೆ ಗುಡ್ ನ್ಯೂಸ್..
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕೊರೊನಾ ಸೋಂಕು ರಿಪೋರ್ಟ್ ನೆಗಟಿವ್ ಬಂದ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ಆಡೋದಕ್ಕೆ ಲಂಡನ್ ನತ್ತ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ವಿನ್ ಇಂದು ಲಂಡನ್ ಫ್ಲೈಟ್ ಹತ್ತಲಿದ್ದಾರೆ ಎಂದು ಬಿಸಿಸಿಐ ಪ್ರತಿನಿಧಿಗಳು ತಿಳಿಸಿದ್ದಾರೆ.
ಹೋಂ ಐಸೋಲೇಷನ್ ನಲ್ಲಿದ್ದ ಅಶ್ವಿನ್ ಗೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.
ಆತ ಇಂಗ್ಲೆಂಡ್ ಗೆ ಹೋದ ಬಳಿಕ ಮತ್ತೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ನಡೆಯಲಿದೆ.
ಆ ನಂತರ ಅವರು ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ಆದ್ರೆ ಅಶ್ವಿನ್ ಈ ತಿಂಗಳ 24 ರಂದು ಲಿಸಸ್ಟರ್ ಶೈರ್ ನಲ್ಲಿ ನಡೆಯಲಿರುವ ಪ್ರಾಕ್ಟೀಸ್ ಮ್ಯಾಚ್ ಮಿಸ್ ಮಾಡಿಕೊಳ್ಳಲಿದ್ದಾರೆ.
ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ವರ್ಷ ನಡೆಯಬೇಕಿದ್ದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ರದ್ದುಗೊಳಿಸಲಾಗಿತ್ತು.
ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್, ಫಿಸಿಯೋ ನಿತಿನ್ ಪಟೇಲ್ ಮತ್ತು ಸಹಾಯಕ ಫಿಸಿಯೋ ಯೋಗೇಶ್ ಪರ್ಮಾರ್ ಅವರಿಗೆ ಕರೋನಾ ತಗುಲಿತ್ತು.
ಇದರ ನಂತರ ಕೊನೆಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಯಿತು.
4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿದೆ. ಆಗ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದರು.
ಅದೇ ಸಮಯದಲ್ಲಿ, ರವಿಶಾಸ್ತ್ರಿ ತಂಡದಲ್ಲಿ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದರು.
ಇದೀಗ ತಂಡದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದ್ದು, ತಂಡದ ಕೋಚ್ ರಾಹುಲ್ ದ್ರಾವಿಡ್.
ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಏಕೈಕ ಟೆಸ್ಟ್ ಪಂದ್ಯವನ್ನಾಡಬೇಕಿದೆ.