ಏಜಾಜ್ ಪಟೇಲ್ ಗೆ ಅಶ್ವಿನ್ ಸಹಾಯ.. ashwin saaksha tv
ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬೌಲರ್ ಒಬ್ಬರು ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದದ್ದು ಇದು ಮೂರನೇ ಬಾರಿ. ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ನಂತರ ಎಜಾಜ್ ಈ ಸಾಧನೆ ಮಾಡಿದ ಮೂರನೇ ಬೌಲರ್ ಆಗಿದ್ದಾರೆ.
ಹೀಗಾಗಿ ಎಜಾಜ್ ಮೇಲೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಈ ಮಧ್ಯೆ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಿವೀಸ್ ನ ಎಜಾಜ್ ಒಂದು ವಿಷಯಕ್ಕೆ ನೆರವಾಗಿದ್ದಾರೆ.
ಎಜಾಜ್ ಪಟೇಲ್ ಭಾರತದ ವಿರುದ್ಧ 10 ವಿಕೆಟ್‌ಗಳ ಸಾಧನೆ ಮಾಡುವವರೆಗೂ ಅವರ ಹೆಸರು ಯಾರಿಗೂ ತಿಳಿದಿರಲಿಲ್ಲ. ಅವರ ಹೆಸರಿನಲ್ಲಿ ಟ್ವಿಟರ್ ಖಾತೆ ಇದ್ದರೂ ಬ್ಲೂ ಟಿಕ್ ಮಾರ್ಕ್ ಇರಲಿಲ್ಲ. ಇದನ್ನು ಗಮನಿಸಿದ ಅಶ್ವಿನ್, ಅವರೇ ಫೀಲ್ಡಿಗಿಳಿದು ಎಜಾಜ್ ಪರವಾಗಿ ಟ್ವಿಟ್ಟರ್ ಗೆ ಮನವಿ ಮಾಡಿದ್ದಾರೆ.
”ಆತ್ಮೀಯ ಟ್ವಿಟರ್.. ಟೆಸ್ಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಜಾಜ್. ಅವರ ಖಾತೆಯನ್ನು ಪರಿಶೀಲಿಸಿ, ನೀಲಿ ಟಿಕ್ ಮಾರ್ಕ್ ನೀಡಿ, ”ಎಂದು ಮನವಿ ಮಾಡಿಕೊಂಡಿದ್ದಾರೆ.
ಅಶ್ವಿನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಟ್ವಿಟರ್ ಅಧಿಕಾರಿಗಳು ಎಜಾಜ್ ಅವರ ಟ್ವಿಟ್ಟರ್ ಅನ್ನು ಪರಿಶೀಲಿಸಿ ಬ್ಲೂ ಟಿಕ್ ನೀಡಿದ್ದಾರೆ. ಇದನ್ನು ತಿಳಿದ ಅಶ್ವಿನ್ ಥ್ಯಾಂಕ್ಸ್ ಎಂದು ಟ್ವಿಟ್ಟರ್ ನಲ್ಲಿ ರಿಟ್ವೀಟ್ ಮಾಡಿದ್ದಾರೆ.
ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ 10 ವಿಕೆಟ್ ಪಡೆದಿದ್ದ ಎಜಾಜ್ ಗೆ ಅಶ್ವಿನ್ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದು, ಜೆರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರ ಸಹಿ ಇದೆ.








